ಬಂಟ್ವಾಳ: ಇಲ್ಲಿನ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದ ವತಿಯಿಂದ ಕೊರೊನಾ ನಿಮಿತ್ತ ಸರ್ಕಾರ ಕೈಗೊಂಡ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ ಅರಳ ಗ್ರಾಮ ಮತ್ತು ಕೂರಿಯಾಳ ಗಡಿಭಾಗದ ಬಡಕುಟುಂಬಗಳಿಗೆ ಉಚಿತ ಅಕ್ಕಿ ವಿತರಿಸಲಾಯಿತು. ದೇವಳದ ಅರ್ಚಕರಾದ ಹರೀಶ್ ಭಟ್ ರವರು ಕೊರೊನಾ ಮಹಾಮಾರಿಯನ್ನು ಗ್ರಾಮ – ರಾಷ್ಟ್ರ ದಿಂದ ಹೊಡೆದೋಡಿಸಿ, ಸಮಷ್ಟಿ ಯ ಸರ್ವರನ್ನೂ ರಕ್ಷಿಸುವಂತೆ ದೇವತಾ ಸನ್ನಿಧಿಯಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಜಗದೀಶ್ ಆಳ್ವ ಹಾಗೂ ಇತರ ಪ್ರಮುಖರು ಭಾಗವಹಿಸಿದರು. ಉದ್ಯಮಿ ರವಿಶಂಕರ್ ಬಡಾಜೆ ಮತ್ತು ಊರಿನ ದಾನಿಗಳು ಆರ್ಥಿಕ ದೇಣಿಗೆ ನೀಡಿ ಸಹಕರಿಸಿದರು.
