ಮಂಗಳೂರು: ಲಾಕ್ ಡೌನ್ ಎಫೆಕ್ಟ್‍ನಿಂದಾಗಿ ಸರಣಿ ರಜೆಗಳ ಪರಿಣಾಮ ನಿಗದಿತ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಕೆನರಾ ಎಂಜಿನಿಯರಿಂಗ್ ಕಾಲೇಜು ತನ್ನ ವಿದ್ಯಾರ್ಥಿಗಳಿಗಾಗಿ ಆನ್‍ಲೈನ್ ಪಠ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಮೈಕ್ರೋಸಾಫ್ಟ್ ಟೀಂ ಟೂಲ್ಸ್, ಸ್ಕಿಲ್ಲಲರಿ, ಝೂಮ್ ಪ್ಲಾಟ್‍ಫಾರಂ ಹೀಗೆ ಆನ್‍ಲೈನ್ ಟೂಲ್ಸ್‍ಗಳ ಮೂಲಕ ಬೋಧನೆ, ಸಂವಾದ ಇನ್ನಿತರ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಬೋಧಕರು ಟೀಚ್ ಫ್ರಾಂ ಹೋಂ ಮತ್ತು ವಿದ್ಯಾರ್ಥಿಗಳಿಗೆ ಲರ್ನ್, ವರ್ಕ್ ಪ್ರಾಂ ಹೋಂ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗಿದೆ. CEC Online Academic Activity

ಆನ್‍ಲೈನ್ ಮೂಲಕವೇ ವಿಭಾಗ ಮುಖ್ಯಸ್ಥರ ಮೀಟಿಂಗ್, ವಿಭಾಗ ಮುಖ್ಯಸ್ಥರು ತಮ್ಮ ಉಪನ್ಯಾಸಕರ ಜತೆ ಮೀಟಿಂಗ್, ವಿದ್ಯಾರ್ಥಿಗಳಿಗೆ ಆನ್ ಲೈನ್ ಸಂವಾದ, ವೀಡಿಯೋ ಉಪನ್ಯಾಸಗಳು, ಕೋರ್ಸುಗಳು, ನೋಟ್ಸ್‍ಗಳ, ಪ್ರಶ್ನಾ ಕೋಶಗಳ ರವಾನೆ, ಪ್ರಾಯೋಗಿಕ ಪರೀಕ್ಷೆ, ಅಸೈನ್‍ಮೆಂಟ್‍ಗಳು, ಪ್ರಾಜೆಕ್ಟ್ ಕುರಿತಾದ ಚಿಂತನೆಗಳಿಗೆ ಆನ್ ಲೈನ್ ವೇದಿಕೆ ರೂಪಿಸಲಾಗಿದೆ. ವಾಟ್ಸಾಪ್ ವೀಡಿಯೋ, ಸಂದೇಶಗಳು, ಗ್ರೂಫ್‍ಗಳ ಮೂಲಕವೂ ಸಂವಹನ ಅವಕಾಶಗಳನ್ನು ಬಳಸಿಕೊಳ್ಳಲಾಗುತ್ತಿದೆ. ಕಾಲೇಜಿನ ಪ್ರಾಂಶುಪಾಲ ಡಾ. ಗಣೇಶ ವಿ.ಭಟ್ ಮಾರ್ಗದರ್ಶನದಲ್ಲಿ ವಿಭಾಗ ಮುಖ್ಯಸ್ಥರುಗಳ ಜತೆ ಪ್ರಾಧ್ಯಾಪಕರಾದ ಹೆಚ್. ನಾಗೇಶ್ ಶೆಣೈ ಹಾಗೂ ಅಲೋಕ್ ರಂಜನ್ ಈ ತಾಂತ್ರಿಕ ವೇದಿಕೆಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಇದಕ್ಕೆ ವಿದ್ಯಾರ್ಥಿಗಳ ಸ್ಪಂದನವೂ ಉತ್ತಮವಾಗಿದೆ ಎಂದು ತಿಳಿದು ಬಂದಿದೆ. ಎಐಸಿಟಿಇ ಮಾರ್ಗದರ್ಶನದಂತೆ ಬೋಧಕರು ಆನ್‍ಲೈನ್ ಕೋರ್ಸುಗಳಲ್ಲಿ, ಸಂಶೋಧನಾ ಚಟುವಟಿಕೆಗಳಲ್ಲೂ ನಿರತರಾಗಿದ್ದಾರೆ.
ಇಷ್ಟೇ ಅಲ್ಲದೇ ಕಾಲೇಜಿನ ಬೋಧಕ, ಬೋಧಕೇತರ ಸಿಬಂದಿಗಳು, ವಿದ್ಯಾರ್ಥಿಗಳು ತಾವಿರುವ ಸ್ಥಳದ ಆಸುಪಾಸಿನಲ್ಲಿ ಕೋವಿಡ್ 19 ತಡೆ ನಿಟ್ಟಿನಲ್ಲಿ ಸಮಾಜ ಸೇವೆ, ತುರ್ತು ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ

By suddi9

Leave a Reply

Your email address will not be published. Required fields are marked *