ಕೆ.ಜಿ.ಎಫ್: ರಾಬರ್ಟ್‍ಸನ್‍ಪೇಟೆ ಪೊಲೀಸ್ ವೃತ್ತದ ಅಪರಾಧ ವಿಭಾಗದ ಪೊಲೀಸರು ಮದ್ಯದಂಗಡಿಯಲ್ಲಿ ಕಳವು ಮಾಡಲಾಗಿದ್ದ 24 ಗಂಟೆಯೊಳಗಾಗಿ ಕಳವು ಆರೋಪಿಗಳಿಬ್ಬರನ್ನು ಬಂಧಿಸಿ, ಅವರಿಂದ ರೂ: 17,702 ಗಳ ಮೌಲ್ಯದ ಮದ್ಯದ ಬಾಟಲ್‍ಗಳು ಮತ್ತು ಮದ್ಯದ ಪಾಕೆಟ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವುದಾಗಿ ಜಿಲ್ಲಾ ರಕ್ಷಣಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ ಅವರು ತಿಳಿಸಿದ್ದಾರೆ.

*ಎಂ.ಸಿಕಂದರ್

SIKANDAR APET PS CR 25-2020* ಎ.ಅರುಳ್,

ARUL APET PS CR 25-2020

ಏ.7 ರಂದು ಆಂಡ್ರಸನ್‍ಪೇಟೆ ಪೊಲೀಸ್ ಠಾಣೆಯಲ್ಲಿ ವರದಿಯಾಗಿದ್ದ ಪಿ.ದಂಡಾಯುಧಪಾಣಿ ಅವರ ಮಾಲೀಕತ್ವದ ಮದ್ಯದ ಅಂಗಡಿಯಲ್ಲಿ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಪಿಐ ಎಂ.ಸೂರ್ಯಪ್ರಕಾಶ್ ನೇತೃತ್ವದ ಅಪರಾಧ ವಿಭಾಗದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಸೂಸೈಪಾಳ್ಯಂನ ಎ.ಅರುಳ್ (38) ಮತ್ತು ಆಂಡ್ರಸನ್‍ಪೇಟೆ ಜೆಂಡಾ ಬೀದಿಯ ಎಂ.ಸಿಕಂದರ್ ಎಂಬುವ ಆರೋಪಿಗಳನ್ನು ಬಂಧಿಸಿ, ಅವರಿಂದ ಕಳುವು ಮಾಡಲಾಗಿದ್ದ ರೂ: 17702/- ರೂಗಳ ಬೆಲೆ ಬಾಳುವ ಮದ್ಯದ ಬಾಟಲ್‍ಗಳು ಮತ್ತು ಮದ್ಯದ ಟೆಟ್ರಾ ಪಾಕೆಟ್‍ಗಳನ್ನು ವಶಪಡಿಸಿಕೊಂಡಿರುತ್ತಾರೆ.
ಡಿವೈಎಸ್ಪಿ ಬಿ.ಕೆ.ಉಮೇಶ್ ಅವರ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಿ, ಕಳುವಾಗಿದ್ದ ಮಾಲು ವಶಪಡಿಸಿಕೊಳ್ಳಲು ಶ್ರಮಿಸಿದ ಸಿಪಿಐ ಎಂ. ಸೂರ್ಯಪ್ರಕಾಶ್, ಅಪರಾಧ ವಿಭಾಗದ ಸಿಬ್ಬಂದಿಗಳಾದ ಗಜೇಂದ್ರ, ರಮೇಶ್, ವೆಂಕಟೇಶಪ್ಪ, ಮಹೇಂದ್ರಕುಮಾರ್, ಚೇತನ್, ಕೃಷ್ಣಪ್ಪ ಮತ್ತಿತರರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ ಅವರು ಶ್ಲಾಘಿಸಿದ್ದಾರೆ.

By suddi9

Leave a Reply

Your email address will not be published. Required fields are marked *