ಬಂಟ್ವಾಳ : ರೋಟರಿ ಕ್ಲಬ್ ಬಂಟ್ವಾಳ, ಪುರಸಭೆ ಮತ್ತು ಅಗ್ನಿಶಾಮಕದಳ, ಸಹಕಾರದೊಂದಿಗೆ ರಾಸಾಯನಿಕ ದ್ರಾವಣ ಸಿಂಪಡಣಾ ಕಾರ್ಯ ಮಂಗಳವಾರ ಪಾಣೆಮಂಗಳೂರು, ಬಂಟ್ವಾಳ ನಗರದ ವಿವಿಧ ಭಾಗಗಳಲ್ಲಿ ನಡೆಯಿತು.
ಪಾಣೆಮಂಗಳೂರು ನಗರದ ಸುತ್ತಮುತ್ತ,ಬಂಟ್ವಾಳ ಬಡ್ಡಕಟ್ಟೆಯ ಮೀನು ಮಾರ್ಕೆಟ್ ರಸ್ತೆ, ವಿ.ಪಿ.ರಸ್ತೆ,ತ್ಯಾಗರಾಜ ರಸ್ತೆ, ರಥಬೀದಿ,ಕೊಟ್ರಮಣಗಂಡಿ, ಜಕ್ರಿಬೆಟ್ಟು ಮಾದಲಾದೆಡೆ ಫಿನಾಯಿಲ್ ಮತ್ತು ಬ್ಲೀಚಿಂಗ್ ಪೌಡರ್ ರಾಸಾಯನಿಕವನ್ನು ಸಿಂಪಡಣೆ ನಡೆಯಿತು. ನಾಯಿಲ್, ಬ್ಲೀಚಿಂಗ್ ಪೌಡರ್, ನೀರು ಇದಕ್ಕೆ ಬಳಕೆಯಾಗಿತ್ತು.
ಈ ಸಂದರ್ಭ ಪುರಸಭಾ ಸದಸ್ಯ ಎ.ಗೋವಿಂದ ಪ್ರಭು, ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಸೂಚನೆಯಂತೆ ಪುರಸಭೆಯ ಪರಿಸರ ಸಹಾಯಕ ಇಕ್ಬಾಲ್, ಅಗ್ನಿಶಾಮಕದಳದ ಸಿಬ್ಬಂದಿಗಳು ಹಾಗೂ ರೋ.ಪ್ರಕಾಶ್ ಕಾರಂತ ಅವರ ತೋಟದ ಕಾರ್ಮಿಕರು ಪ್ರತ್ಯೇಕವಾಗಿ ಸಿಂಪಡಣಾ ಕಾರ್ಯಾಚರಣೆ ನಡೆಸಿದರು. ಈ ಸಂದರ್ಭ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷೆ ಶಿವಾನಿ ಬಾಳಿಗಾ ಪದಾಧಿಕಾರಿಗಳಾದ ನಾರಾಯಣ ಹೆಗ್ಡೆ,ಸದಾಶಿವ ಬಾಳಿಗಾ ,ಡಾ.ನರೇಂದ್ರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
