ಕೋಲಾರ: ವೈಧ್ಯರಿಗೆ ನಾವೆಲ್ಲರೂ ಕೃತಜ್ಞರಾಗಬೇಕು ಎಂದು ಮಾಜಿ ಸಚಿವ ನಿಸಾರ್ ಅಹ್ಮದ್ ಕರೆ ನೀಡಿದ್ದಾರೆ. ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಹೇಳಿಕೆ ನೀಡಿರುವ ಅವರು ಪ್ರಸಕ್ತ ಸಂದರ್ಭದಲ್ಲಿ ಪ್ರತಿಯೊಬ್ಬರೂ ವೈರಸ್ ಭೀತಿಗೆ ಒಳಗಾಗಿದ್ದಾರೆ. ಒಬ್ಬರನೊಬ್ಬರು ಮುಟ್ಟಲೂ ಹೆದರುವ ಪರಿಸ್ಥಿತಿ ಎದುರಾಗಿದೆ. ಇಂಥ ಸಂದರ್ಭದಲ್ಲಿ ವೈಧ್ಯರು, ದಾದಿಯರು ತಮ್ಮ ಪ್ರಾಣವನ್ನೂ ಒತ್ತೆಯಿಟ್ಟು ಕರೋನಾ ಸಂತ್ರಸ್ಥರ ಶುಶ್ರೂಷೆಗೈಯ್ಯುತ್ತಿದ್ದಾರೆ. ಇದು ನಿಜಕ್ಕೂ ವೈಧ್ಯವಲಯದ ಹಿರಿಮೆಯಾಗಿದೆ ಎಂದು ಶ್ಲಾಘಿಸಿದ್ದಾರೆ.ex minister nisar ahmed

ಪ್ರಸಕ್ತ ಕಾಲಮಾನವು ಜೈವಿಕ ಸಮರದ ಸಂದರ್ಭವಾಗಿದೆ. ಈ ಯುದ್ಧದಲ್ಲಿ ಪ್ರತಿ ಬಾರಿಯೂ ತುಂಬಾ ಅಪಾಯಕಾರಿ ಜೈವಿಕ ದಾಳಿಯನ್ನು ಶತ್ರು ರಾಷ್ಟ್ರಗಳು ನಮ್ಮ ವಿರುದ್ಮಾಡುತ್ತಿವೆ. ಹೀಗಾಗಿ ಇಂಥ ಪ್ರತಿ ಸಂದರ್ಭದಲ್ಲಿಯೂ ಸದರಿ ಜೈವಿಕ ವೈರಾಣುಗಳಿಗೆ ಸೂಕ್ತ ಔಷಧಿಗಳನ್ನು ಸಂಶೋಧಿಸುವವರೆಗೂ ರೋಗಿಗಳನ್ನು ಶುಶ್ರೂಷೆ ಮಾಡುವುದು ವೈಧ್ಯರ ಬಗಲಿಗೇರಿತ್ತು. ಈ ಸಂದರ್ಭದೆಲ್ಲಿ ಸದರಿ ವೈದ್ಯವಲಯದ ಜೀವಕ್ಕೂ ಸೋಂಕು ಪ್ರಮಾಧ ಇತ್ತು. ಆದರೂ ಅವರು ತಮ್ಮ ವೃತ್ತಿಪರತೆ, ಸೇವಾಮನೋಭಾವನೆ ಮೆರೆದು ಸೈ ಎನಿಸಿಕೊಂಡಿದ್ದಾರೆ ಎಂದಿದ್ದಾರೆ.

ಪ್ರಸಕ್ತ ಸಂದರ್ಭದಲ್ಲಿ ಎಲ್ಲೆಡೆ ರೋಗಿಗಳನ್ನು ಧರ್ಮ, ಜನಾಂಗ ದೃಷ್ಟಿಯಿಂದ ಪ್ರತ್ಯೇಕಿಸಿ ನೋಡುವ ಮನೋಭಾವನೆಯನ್ನು ಹುಟ್ಟುಹಾಕಲಾಗುತ್ತಿದೆ. ವೈರತ್ವವನ್ನೂ ಬೆಳೆಸಲಾಗುತ್ತಿದೆ. ಮನುಜ ತನ್ನ ಸರಿಸಾಟಿ ಮನುಜನನ್ನು ಸಂಶಯ, ಧ್ವೇಷದಿಂದ ನೋಡುವ ದುಃಸ್ಥಿತಿ ಪ್ರಸ್ತುತ ನಿರ್ಮಾಣವಾಗಿ ಮಾನವತ್ವ ಮರೆಯಲಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.
ಜೈವಿಕ ಸಮರದ ಸಂದರ್ಭದಲ್ಲಿ ಜೈವಿಕ ಸಮರದ ವಿರುದ್ಧ ಮನುಜ ಒಗ್ಗಟ್ಟಾಗಬೇಕೇ, ವಿಘಟಿತರಾಗಬಾರದು. ತಪ್ಪಿದಲ್ಲಿ ಮನುಜನ ವಿರುದ್ಧ ಜೈವಿಕ ಶಕ್ತಿ ಗೆಲ್ಲುವ ಸಂದರ್ಭ ಮೂಡುತ್ತದೆ. ಆಗ ಮನುಜನ ನಾಶ ಖಂಡಿತ. ಇನ್ನಾದರೂ ಸಂಕಷ್ಟದ ಸಂದರ್ಭದಲ್ಲಿ ನಾವೆಲ್ಲರೂ ನಮ್ಮ ಧರ್ಮ, ಜನಾಂಗಗಳನ್ನು ಮರೆತು ಮನುಜರಾಗಿ ನೋಡೋಣ ಎಂದು ಸಂದೇಶ ನೀಡಿದ್ದಾರೆ.

ಕೆಲವು ಪಟ್ಟಭದ್ರಹಿತಾಸಕ್ತಿಗಳು ಒಗ್ಗಟ್ಟನ್ನು ಒಡೆಯುವ ವಿಛಿಧ್ರಕೃತ್ಯಗಳನ್ನು ವ್ಯವಸ್ಥಿತವಾಗಿ ಸಂಚು ಮಾಡಿ ನಿರ್ವಹಿಸುತ್ತಿವೆ. ಇದು ವೈರಾಣುಗಳಿಗಿಂತಾ ಭೀಕರ ಫಲಿತಾಂಶಕ್ಕೆ ಎಡೆ ಮಾಡಿಕೊಡಲಿದೆ. ಮನೆಗೆ ಬೆಂಕಿ ಹೊತ್ತಿ ಉರಿಯುವ ಸಂದರ್ಭದಲ್ಲಿ ಸದರಿ ಬೆಂಕಿಯಿಂದ ಬೀಡಿ ಹೊತ್ತಿಸಿಕೊಳ್ಳುವ ಅಯೋಗ್ಯ ಕೆಲಸವನ್ನು ಯಾವೊಬ್ಬರೂ ಮಾಡಬಾರದು. ಇದು ವೈರಾಣುಗೂ ಮೀರಿದ ದುಷ್ಕøತ್ಯವಾಗಿದೆ ಎಂದು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ನಾವೆಲ್ಲರೂ ವೈಧ್ಯವಲಯಕ್ಕೆ ಬೆನ್ನಾಗಿ ನಿಲ್ಲಬೇಕು. ಅವರ ಪ್ರತಿ ಕಾರ್ಯಾಚರಣೆಗೆ ನಾವೆಲ್ಲರೂ ಪೂರ್ಣಪ್ರಮಾಣದ ಬೆಂಬಲವನ್ನು ನೀಡಬೇಕು. ಪ್ರೋತ್ಸಾಹವನ್ನು ನೀಡಬೇಕು. ಈ ಮೂಲಕ ಪ್ರತಿಯೊಬ್ಬರ ಮನ ಗೆಲ್ಲಬೇಕು. ನಮಗೆ ಎಷ್ಟೇ ನೋವಾದರೂ, ಅವಮಾನವಾದರೂ, ತೊಂದರೆಯೇ ಆದರೂ ನಾವು ಅದಕ್ಕೆ ಎದುರಾಡದೇ ಪ್ರೀತಿಯಿಂದ ಎದುರಾಳಿಯ ಮನ ಗೆಲ್ಲಬೇಕು ಎಂದು ಕರೆ ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *