ಬಂಟ್ವಾಳ:    ಕಳ್ಳಿಗೆ ಗ್ರಾಮದ ಬೆಂಜನಪದವು ನಿವಾಸಿ ರಮಾನಂದ ಶೆಟ್ಟಿ ಹಾಗೂ ವಿಜಯಲಕ್ಷ್ಮೀ ದಂಪತಿಯ ಪುತ್ರಿ ಅನಿಶಾ ಶೆಟ್ಟಿ ತನ್ನ ಹುಟ್ಟುಹಬ್ಬವನ್ನು ಬಡಕುಟುಂಬಕ್ಕೆ   ಅಕ್ಕಿಯನ್ನು ದಾನವಾಗಿ ನೀಡುವ ಮೂಲಕ  ಅರ್ಥಪೂರ್ಣವಾಗಿ ಆಚರಿಸಿಕೊಂಡರು.IMG-20200405-WA0035

ಪ್ರಥಮವಾಗಿ ಭಾರತಮಾತೆಗೆ ದೀಪ ಪ್ರಜ್ವಲಿಸಿ, ಪುಷ್ಪಾರ್ಚನೆಗೈದು ಪ್ರಾರ್ಥಿಸಲಾಯಿತು. ಬಳಿಕ 60 ಮಂದಿ ಬಡವರಿಗೆ ತಲಾ 10 ಕೆಜಿ ಅಕ್ಕಿ ,2 ತೆಂಗಿನಕಾಯಿ ನೀಡುವ ಮೂಲಕ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಆಕೆಯ ಈ    ಸೇವೆಗೆ  ಕಳ್ಳಿಗೆ ಗ್ರಾಮಸ್ಥರು  ಅಭಿನಂದನೆ ಸಲ್ಲಿಸಿದ್ದಾರೆ.

By suddi9

Leave a Reply

Your email address will not be published. Required fields are marked *