ಕಲ್ಲಡ್ಕ:ವಿಶ್ವದಾದ್ಯಂತ ಪಸರಿಸಿದ ಕೊರೊನಾ ವೈರಸ್‍ನ್ನುತಡೆಯುವಉದ್ದೇಶದಿಂದದೇಶದ ಪ್ರಧಾನಿ ಲಾಕ್‍ಡೌನ್‍ಘೋಷಣೆ ಮಾಡಿರುವ ವಿಚಾರ ನಮಗೆಲ್ಲಾ ತಿಳಿದಿದೆ. ಸಾಮಾಜಿಕಅಂತರವನ್ನು ಕಾಯ್ದುಕೊಳ್ಳಲು ಇದೊಂದು ದಿಟ್ಟ ಹೆಜ್ಜೆಯೂ ಹೌದು. ಈ ಮಧ್ಯೆಅದೆಷ್ಟೋ ಕೂಲಿ ಕಾರ್ಮಿಕರಿಗೆ ಕೆಲಸಕ್ಕೆ ಹೋಗಲು ಸಾಧ್ಯವಾಗದೇಊಟಕ್ಕೂತೊಂದರೆಅನುಭವಿಸುತ್ತಿರುವುದು ತಿಳಿದು ಬಂತು.IMG-20200331-WA0143

ಇದನ್ನು ಮನಗಂಡಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಹಿರಿಯರಾದಡಾ| ಪ್ರಭಾಕರ ಭಟ್‍ಕಲ್ಲಡ್ಕಇವರುವಿದ್ಯಾಕೇಂದ್ರದಎಲ್ಲಾ ಶಿಕ್ಷಕರಿಗೆ ಕರೆ ಮಾಡಿ ನಿಮ್ಮತರಗತಿಯಲ್ಲಿರುವಎಲ್ಲಾ ವಿದ್ಯಾರ್ಥಿಗಳ ಮನೆಗೆ ದೂರವಾಣಿ ಮಾಡಿಅವರ ಮನೆಯ ಪರಿಸ್ಥಿತಿ ತಿಳಿದುಕೊಳ್ಳಬೇಕು. ಅಲ್ಲದೇಯಾರಿಗಾದರೂಮನೆಗೆ ಆಹಾರ ಸಾಮಾಗ್ರಿಗಳು ಬೇಕಾದಲ್ಲಿಕೂಡಲೇ ವಿಚಾರಿಸಿ ತಿಳಿಸಬೇಕು ಎಂದರು. ಶಿಕ್ಷಕರು ಮನೆಗೆ ದೂರವಾಣಿ ಮಾಡುವ ಸಂದರ್ಭದಲ್ಲಿಊಟಕ್ಕೆ ಸಮಸ್ಯೆಅನುಭವಿಸುವ ಎಷ್ಟೋ ಮನೆಗಳು ತಿಳಿದು ಬಂತು. ಅವರಿಗೆಕೂಡಲೇಒಂದು ವಾಹನದಲ್ಲಿ ಅಕ್ಕಿ ಹಾಗೂ ಇತರಆಹಾರ ಸಾಮಗ್ರಿಗಳನ್ನು ತುಂಬಿಸಿಕೊಂಡು ಅವರ ಮನೆ ಬಾಗಿಲಿಗೆ ಉಚಿತವಾಗಿತಲುಪಿಸಲಾಯಿತು.

ಹೀಗೆ 367 ವಿದ್ಯಾರ್ಥಿಗಳ ಮನೆಗಳು ಮಾತ್ರವಲ್ಲದೆಇತರ ಮನೆಗಳಿಗೂ ಆಹಾರ ಸಾಮಾಗ್ರಿಗಳನ್ನು ತಲುಪಿಸಲಾಯಿತು. ಶ್ರೀರಾಮ ವಿದ್ಯಾಕೇಂದ್ರಶೈಕ್ಷಣಿಕಚಟುವಟಿಕೆ ಮಾತ್ರವಲ್ಲದೇ ಅನೇಕ ರೀತಿಯ ಸಾಮಾಜಿಕ ಚಟುವಟಿಕೆಗಳನ್ನು ಸಂಸ್ಥೆಯ ಪ್ರಾರಂಭದಿಂದಲೂ ಮಾಡುತ್ತಾ ಬಂದಿರುತ್ತದೆ. ಅದೇರೀತಿಈ ತುರ್ತು ಸಂದರ್ಭದಲ್ಲಿಯೂ ವಿದ್ಯಾಕೇಂದ್ರದ ಸ್ಪಂದನೆಜನಮೆಚ್ಚುಗೆ ಪಡೆದಿದೆ.

By suddi9

Leave a Reply

Your email address will not be published. Required fields are marked *