ಬಂಟ್ವಾಳ : ಜಾಗತಿಕ ಮಟ್ಟದಲ್ಲಿಯೇ ಮಾನವ ಲೋಕವನ್ನೇ ತಲ್ಲಣಗೊಳಿಸಿ ಜನ ಸಮುದಾಯದಲ್ಲಿ ಅಂತಕವನ್ನುಂಟು ಮಾಡಿದ ಕೊರೊನಾ ವೈರಾಸ್ ತಡೆಗಟ್ಟುವಲ್ಲಿ ಜನರ ಸಹಕಾರವು ಅತ್ಯಗತ್ಯವಾಗಿದ್ದು, ವಿದೇಶದಿಂದ ಬಂದವರನ್ನು 14 ದಿವಸ ಮನೆ ಬಿಟ್ಟು ಹೋಗದಂತೆ ಸ್ಥಳೀಯರು ಗಮನಹರಿಸ ಬೇಕೆಂದು ಬಂಟ್ವಾಳ ತಾ.ಪ.ಸದಸ್ಯ ಪ್ರಭಾಕರ ಪ್ರಭು ಹೇಳಿದ್ದಾರೆ. ಸಂಗಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಗುರುವಾರ ನಡೆದ ಕೊರೊನಾ ವೈರಸ್ ಕುರಿತ ಜನಜಾಗೃತಿ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತಾನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ರಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೀಪಕ್ ಮಾತನಾಡಿ, ಕೊರೊನಾ ವೈರಸ್ ಬಗ್ಗೆ ಜನ ಅಂತಕ ಪಡುವ ಅಗತ್ಯವಿಲ್ಲ.ಆದರೂ ಮುಂಜಾಗ್ರತಾ ಕ್ರಮವಾಗಿ ಎಚ್ಚರದಿಂದಿರಬೇಕು. ವಿದೇಶದಿಂದ ಬಂದವರಲ್ಲಿ ಕೋರೊನಾ ವೈರಾಸ್ ಕಂಡುಬಂದಿಲ್ಲವಾದರೂ ಅವರಿಂದ 14 ದಿನಗಳ ಕಾಲ ಸ್ವಲ್ಪ ದೂರ ಇರಬೇಕಾಗುತ್ತದೆ ಎಂದರು. ಸ್ವಯಂ ಸ್ಪೂರ್ತಿಯಾಗಿ ಪರಿಸರದಲ್ಲಿ ಸ್ವಚ್ಚತೆಯನ್ನು ಕಾಪಾಡಬೇಕು, ಜ್ವರ, ಭೇದಿ,ವಾಂತಿಯ ಲಕ್ಷಣ ಕಂಡು ಬಂದಲ್ಲಿ ತಕ್ಷಣವೇ ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಮಾಡಬೇಕು. ಗುಂಪು ಗುಂಪಾಗಿ ಕಾರ್ಯಕ್ರಮಕ್ಕೆ ಹೋಗುವುದನ್ನು ತಪ್ಪಿಸುವುದು, ಸಾರ್ವಜನಿಕ ಕಾರ್ಯಕ್ರಮಕ್ಕೆ ಕಡಿವಾಣ ಹಾಕುವುದು, ಅಲ್ಲದೆ ಯಾವುದೇ ಮಾಹಿತಿಯನ್ನು ಕಾಲಕಾಲಕ್ಕೆ ಆರೋಗ್ಯ ಸಹಾಯಕಿಯರಿಗೆ ತಲುಪಿಸುವುದರೊಂದಿಗೆ ಹತೋಟಿ ತರಬಹುದು ಎಂದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ದರ್ಮರಾಜ್ ಈ ಬಗ್ಗೆ ಸಲಹೆ ನೀಡಿ ಕೊರೊನಾ ವೈರಸ್ ನಿಂದ ಜನ ಭಯಭೀತರಾಗಿರುವುದರಿಂದ ಪ್ರತಿ ಮಂಗಳ ವಾರ ನಡೆಯುವ ವಾರದ ಸಂತೆಯನ್ನು ಅನಿರ್ದಿಷ್ಟವಾಗಿ ರದ್ದುಗೋಳಿಸಲು ಕ್ರಮ ಜರುಗಿಸಲಾಗುವುದು,ರಸ್ಥೆ ಬದಿಯಲ್ಲಿ ಮಾರಾಟ ಮಾಡುವ ತಿಂಡಿ,ತಿನಿಸುಗಳ ಫಾಸ್ಟ್ ಪುಡ್ ಸ್ಟಾಲ್ ಗಳನ್ನು ಮುಚ್ಚಲಾಗುವುದು,ಇನ್ನಿತರ ಪೂರಕ ಕ್ರಮಗಳನ್ನು ಕೈಗೊಳ್ಲಲು ತೀರ್ಮಾನಿಸಲಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸತೀಶ್ ಪೂಜಾರಿ ವಹಿಸಿದ್ದರು. ಗ್ರಾ.ಪಂಚಾಯತ್ ಸದಸ್ಯ ರಾದ ಮಾದವ ಶೆಟ್ಟಿಗಾರ್,ಶ್ರೀದರ ಎಸ್.ಪಿ.,ಸುರೇಶ್ ಕುಲಾಲ್,ಮಯ್ಯೆದ್ದಿ ಕೆರೆಬಳಿ,ವಿಮಲ ಮೋಹನ್ ,ಮೆಸ್ಕಾಮ್ ಶಾಖಾಧಿಕಾರಿ ತಿಲಕ್ ಕುಮಾರ್, ಆರೋಗ್ಯ ಇಲಾಖೆಯ ಸಿಬ್ವಂದಿಗಳು,ಶಾಲಾ ಮುಖ್ಯೊಪದ್ಯಾರು, ಅಂಗನವಾಡಿ ಕಾರ್ಯಕರ್ತೆಯರು,ಅಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ವಂದಿಗಳು ಉಪಸ್ತಿರಿದ್ದರು.
