ಬಂಟ್ವಾಳ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಜೆಟ್ ಮಾಹಿತಿ ಕಾರ್ಯಗಾರವು ಮಂಗಳವಾರ ಬಿ.ಸಿ.ರೋಡಿನಲ್ಲಿರುವ ಬಿ.ಜೆ.ಪಿ ಕಛೇರಿಯಲ್ಲಿ ನಡೆಯಿತು. ಬಂಟ್ವಾಳದ ಚಾರ್ಟಡ್ ಅಕೌಂಟೆಂಟ್ ದಿನೇಶ್ ಪೈ ಅವರು ಅಂಕಿ ಅಂಶಗಳ ಮೂಲಕ ಬಜೆಟ್ ಬಗ್ಗೆ ಮಾಹಿತಿ ನೀಡಿದರು.
ಕೇಂದ್ರ ಹಾಗೂ ರಾಜ್ಯದ ಬಜೆಟ್ ಉತ್ತಮವಾಗಿದ್ದು, ಜನಸಾಮಾನ್ಯರಿಗೆ ಇದನ್ನು ತಿಳಿಸುವ ಮುಖಾಂತರ ಸರ್ಕಾರದ ಸವಲತ್ತುಗಳು ಜನರಿಗೆ ಪೂರಕವಾಗಿ ಸಿಗುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಕೆಲಸ ಮಾಡುವಂತೆ ತಿಳಿಸಿದರು.ಬಂಟ್ವಾಳ ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಅವರ ಅಧ್ಯಕ್ಷತೆ ವಹಿಸಿದರು.
ಜಿ.ಪಂ. ಸದಸ್ಯರಾದ ರವೀಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ, ಕ್ಷೇತ್ರದ ಪದಾಧಿಕಾರಿಗಳು, ತಾಲೂಕು ಪಂಚಾಯತ್ ಸದಸ್ಯರು, ಪುರಸಭಾ ಸದಸ್ಯರು, ಕ್ಷೇತ್ರದ ವಿವಿಧ ಮೋರ್ಚಾಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸಮಾಜದ ವಿವಿದ ಕ್ಷೇತ್ರದ ಪ್ರಮುಖರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಬಾಲಭವನ ಮಾಜಿ ಅಧ್ಯಕ್ಷೆ ಸುಲೋಚನ ಜಿ.ಕೆ ಭಟ್, ಜಿಲ್ಲಾ ಪ್ರ.ಕಾರ್ಯದರ್ಶಿ ರಾಮ್‌ದಾಸ್ ಬಂಟ್ವಾಳ ವೇದಿಕೆಯಲ್ಲಿದ್ದರು. ಕ್ಷೇತ್ರ ಪ್ರ.ಕಾರ್ಯದರ್ಶಿ ಡೊಂಬಯ್ಯ ಅರಳ ಸ್ವಾಗತಿಸಿ, ರವೀಶ್ ಶೆಟ್ಟಿ ವಂದಿಸಿದರು.