ಪೊಳಲಿ:  ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೆ ದೇವಾಡಿಗ ಸಮಾಜ ಬಾಂಧವರಿಂದ ಷಷ್ಠಿ ರಥ ಸಮರ್ಪಣೆಯ   ದಿನದಂದು ಬುಧವಾರ   ಎಲುಬು ಕ್ಯಾನ್ಸರ್ ನಿಂದ ಬಳಲುತ್ತಿರುವ  ಕಾರ್ತಿಕ್ ನ ಚಿಕಿತ್ಸೆಗೆ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ವತಿಯಿಂದ  ಚೆಕ್‌  ಹಸ್ತಾಂತರ.e1f93e0c-cbdc-4919-8440-16f9e03dc87b

 ಮಂಗಳೂರು ತಾಲೂಕು ಕಟೀಲು ಸಮೀಪದ ಕೊಂಡೆಮೂಲ ಹರೀಶ್ ದೇವಾಡಿಗ , ರೋಹಿಣಿ ದಂಪತಿಗಳ 11ರ ಹರೆಯದ ಪುತ್ರ ಕಾರ್ತಿಕ್  ಎಲುಬು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗೆ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ಸ್ಪಂದಿಸಿ  ವಿಭಿನ್ನ ವೇಷ ಧರಿಸಿ ಸಂಗ್ರಹಿಸಿದ ರೂ. 62,304 ಚೆಕ್ ಅನ್ನು   ಕಾರ್ತಿಕ್ ನ ತಂದೆಗೆ ಶ್ರೀ ಕ್ಷೇತ್ರ ಪೊಳಲಿಯಲ್ಲಿ ಹಸ್ತಾಂತರಿಸಲಾಯಿತು.60eb7a13-f938-40ef-acb8-106d5eaeb049

ಈ ಸಂದರ್ಭದಲ್ಲಿ ಷಷ್ಠಿ ರಥ ಸಮರ್ಪಣೆ ಸಮಿತಿ ಅಧ್ಯಕ್ಷ ರಾಮದಾಸ್ ಬಂಟ್ವಾಳ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ತುಂಬೆ, ಭಾಸ್ಕರ ಕದ್ರಿ, ಕೃಷ್ಣಪ್ಪ ದೇವಾಡಿಗ ಪೊಳಲಿ, ಪ್ರವೀಣ್ ದೇವಾಡಿಗ ಕಾರಿಂಜ, ಕರುಣಾಕರ ಎಂ.ಎಚ್, ಭುವನೇಶ್ ಪಚ್ಚಿನಡ್ಕ, ಸಂತೋಷ್ ದೇವಾಡಿಗ ಬಂಟ್ವಾಳ, ಹರೀಶ್ ದೇವಾಡಿಗ ಕಾಂಜಿಲಕೋಡಿ, ಸುಧಾಕರ ದೇವಾಡಿಗ ಕಾಂಜಿಲಕೋಡಿ, ಬಂಟ್ವಾಳ ಗ್ರಾಮಾಂತರ ಸಬ್ ಇನ್ಸ್ಪೆಕ್ಟರ್ ಪ್ರಸನ್ನ ಮತ್ತು ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ಇದರ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.
ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ನ ಕಾರ್ಯ ವೈಖರಿಯ ಬಗ್ಗೆ ರಾಮದಾಸ್ ಬಂಟ್ವಾಳ ಮತ್ತು ಪ್ರವೀಣ್ ತುಂಬೆ ಪ್ರಶಂಸೆ ವ್ಯಕ್ತಪಡಿಸಿ ಶುಭ ಹಾರೈಸಿದರು

By suddi9

Leave a Reply

Your email address will not be published. Required fields are marked *