ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ವಿಟ್ಲ ವಲಯ ಸಮಿತಿಯ ಮಹಾ ಸಭೆಯು ಅಧ್ಯಕ್ಷ ಸಿ ರುಕ್ಮಾ ರೂಪಾ ಟೈಲರ್ಸ್ ಇವರ ಅಧ್ಯಕ್ಷತೆಯಲ್ಲಿ ಚಂದಳಿಕೆಯಲ್ಲಿ ನಡೆಯಿತು. ಕಾರ್ಮೀಕ ಇಲಾಖೆಯ ಡಾ| ಸುಮತಿ ಸರಕಾರದಿಂದ ಟೈಲರ್ಸ್ ಗಳಿಗೆ ಸಿಗುವ ಸವಲತ್ತುಗಳ ಮಾಹಿತಿ ನೀಡಿದರು.ಕರ್ನಾಟಕ ರಾಜ್ಯ ಸಮಿತಿಯ ಕಾರ್ಯದರ್ಶಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಸಮಿತಿಯ ಉಪಾಧ್ಯಕ್ಷ ಸುರೇಶ್ ಸಾಲಿಯಾನ್, ನಿಕಟ ಪೂರ್ವ ಉಪಾಧ್ಯಕ್ಷೆ ವಿದ್ಯಾ ಶೆಟ್ಟ, ಜಿಲ್ಲಾ ಸಮಿತಿ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಜತೆಕಾರ್ಯದರ್ಶಿ ಲಿಗೋಧರ್ ಸುಳ್ಯ, ಕೋಶಾಧಿಕಾರಿ ಉದಯ ಅಮಿನ್ ಮಟ್ಟು, ಮಂಗಳೂರು ಸಮಿತಿ ನಿಕಟಪೂರ್ವ ಅಧ್ಯಕ್ಷೆ ಸುಜಾತ ಜೋಗಿ, ಬಂಟ್ವಾಳ ತಾಲೂಕು ಸಮಿತಿಯ ಅರ್ಧಯಕ್ಷ ಈಶ್ವರ ಕುಲಾಲ್, ಕಾರ್ಯದರ್ಶಿ ನಾಗೇಶ್ ಎಂ, ಕೋಶಾಧಿಕಾರಿ ಯದೇಶ್ ತುಂಬೆ, ಇವರು ಭಾಗವಹಿಸಿದ್ದರು.ವಿಟ್ಲ ವಲಯದ ನೂತನ ಅಧ್ಯಕ್ಷರಾಗಿ ಸೀತಾರಾಮ ಸಾಲೆತ್ತೂರು, ಕಾರ್ಯದರ್ಶಿ ಸುಮಿತ್ತಾ ಸಾಲೆತ್ತೂರು, ಕೋಶಾಧಿಕಾರಿ ಶಾಲಿನಿ ಇವರನ್ನು ಆಯ್ಕೆ ಮಾಡಲಾಯಿತು ಹಾಗೂ ಕಾರ್ಯಕಾರಿ ಸಮಿತಿ ರಚಿಸಲಾಯಿತು.ಚಂದಪ್ಪ ಚಂದನ್ ಟೈಲರ್ಸ್ ಸ್ವಾಗತಿಸಿದರು, ಕಾರ್ಯದರ್ಶಿ ರವಿ ಕುಮಾರ್ ಯಶಸ್ವಿ ಟೈಲರ್ಸ್ ವರದಿ ವಾಚಿಸಿದರು. ಸಿ ರುಕ್ಮಾ ವಂದಿಸಿದರು. ವಸಂತ ಪೂಜಾರಿ ಕಲ್ಲಡ್ಕ ನಿರೂಪಿಸಿದರು.
