ಬಂಟ್ವಾಳ:ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಕುಡಿಯುವ ನೀರಿಗಾಗಿ ತುಂಬೆಯಲ್ಲಿ ನಿರ್ಮಿಸಲಾದ ಕಿಂಡಿ ಅಣೆಕಟ್ಟಿನಿಂದ ತೊಂದರೆಗೊಳಗಾದ ರೈತರನ್ನು ಗಮನದಲ್ಲಿರಿಸಿಕೊಂಡು ಸರ್ವೇ ಕಾರ್ಯ ನಡೆಸಲಾಗುವುದು ಎಂದು ಕಂದಾಯ ಸಚಿವ ಆರ್ .ಆಶೋಕ್ ವಿಧಾನಸಭೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ. ಪ್ರಶ್ನೋತ್ರರ ವೇಳೆಯಲ್ಲಿ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ತಂಬೆ ಡ್ಯಾಂನಲ್ಲಿ 7 ಮೀ.ನೀರು ಶೇಖರಿಸುವಷ್ಟು ವಿನ್ಯಾಸ ಹೊಂದಿದ್ದು, ಪ್ರಸ್ತುತ 6 ಮೀ.ಗಷ್ಟೆ ನೀರು ಶೇಖರಿಸಲಾಗುತ್ತಿದೆ.
7 ಮೀ.ಗೆ ನೀರು ಸಂಗ್ರಹಿಸುವ ವೇಳೆ ಆ ಭಾಗದ ರೈತರನ್ನು ಗಮನದಲ್ಲಿರಿಸಿಕೊಂಡು ಸರ್ವೇ ಕಾರ್ಯ ನಡೆಸಲಾಗುವುದು ಎಂದು ಭರವಸೆ ನೀಡಿದರು.ತುಂಬೆ ವೆಂಟೆಡ್ ಡ್ಯಾಂ ನಿಂದಾಗಿ ಸುತ್ತಲಿನ 5 ಗ್ರಾಮದ ರೈತರ ಕೃಷಿ ಭೂಮಿಗೆ ತೊಂದರೆಯಾಗಿದ್ದು, ಸರ್ವೇ ವಿಚಾರದಲ್ಲು ರೈತರಲ್ಲಿ ಸಾಕಷ್ಟು ಗೊಂದಲವಿದೆ. 37 ಮಂದಿ ರೈತರಿಗೆ ಪರಿಹಾರ ನೀಡಿದರೆ,54 ಮಂದಿಗೆ ಇನ್ನು ಪರಿಹಾರ ಸಿಕ್ಕಿಲ್ಲ,ಬಾಕಿ ಉಳಿದವರಿಗೂ ಸೂಕ್ತ ಪರಿಹಾರ ನೀಡಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಯು.ಅವರು ಕಂದಾಯ ಸಚಿವರ ಗಮನಕ್ಕೆ ತಂದರು. ಇದಕ್ಕುತ್ತರಿಸಿದ ಕಂದಾಯ ಸಚಿವ ಆರ್.ಆಶೋಕ್ ಡ್ಯಾಂಗೆ ಸಂಬಂಧಿಸಿ 66.45 ಎಕ್ರೆ ಜಮೀನನ್ನು ಅಲ್ಲಿನ ಜಿಲ್ಲಾಡಳಿತ ನೇರ ಖರೀದಿಸಿದೆ. ಇದಕ್ಕೆ17 ಕೋಟಿ.ರೂ.ವನ್ನು ಬಿಡುಗಡೆ ಮಾಡಿದ್ದು,37 ಮಂದಿಗೆ ಪರಿಹಾರ ನೀಡಲಾಗಿದ್ದು,ಉಳಿದ ರೈತರ ಭೂ ಒಡೆತನದ ಬಗ್ಗೆ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದ್ದು,ಅದು ಮುಗಿದಾಕ್ಷಣ ಉಳಿದ 54 ಮಂದಿ ರೈತರಿಗೂ ಸೂಕ್ತ ಪರಿಹಾರ ಒದಗಿಸಲಾಗುವುದು,ಹಾಗೆಯೇ ಸರ್ವೇ ವಿಚಾರದಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರ ಸಲಹೆಯನ್ನು ಪರಿಗಣಿಸಲಾಗುವುದು ಎಂದುಬಭರವಸೆಯಿತ್ತರು. ಹೋರಾಟ ಸಮಿತಿಯಿಂದ ಅಭಿನಂದನೆ: ತುಂಬೆ ಡ್ಯಾಂ ಸಂತ್ರಸ್ತ ರೈತರ ಹದಿನಾರು ವರ್ಷಗಳ ಹೋರಾಟಕ್ಕೆ ಬೆಂಬಲಿಸಿ ವಿಧಾನಸಭೆಯಲ್ಲಿ ಸೋಮವಾರ ಕಂದಾಯ ಸಚಿವ ಆರ್. ಅಶೋಕ್ ಮೂಲಕ ಸರಕಾರದ ಗಮನ ಸೆಳೆದಿರವ ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ್ ಅವರನ್ನು ತುಂಬೆ ಡ್ಯಾಂ ಸಂತ್ರಸ್ತ ರೈತರು ಹೋರಾಟ ಸಮಿತಿ ಅಭಿನಂದಿಸಿದೆ. ಡ್ಯಾಮ್ ನಿಂದ ವರತೆ ಪ್ರದೇಶಕ್ಕೂ ಸೂಕ್ತ ಪರಿಹಾರ ದೊರಕಿಸುವ ಶಾಸಕರ ಪ್ರಾಮಾಣಿಕ ಪ್ರಯತ್ನಕ್ಕೆ ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎo ಸುಬ್ರಹ್ಮಣ್ಯ ಭಟ್ ಕೃತಜ್ಞತೆ ಸಲ್ಲಿಸಿದ್ದಾರೆ.

