ವಿಟ್ಲ: ಕೆಂಪು ಕಲ್ಲು ಪಾಯ ಮತ್ತು ಕೆಂಪು ಕಲ್ಲು ಲಾರಿ ಮಾಲಕರ ಸಂಘ ವಿಟ್ಲ ವಲಯ ಇದರ ವಾರ್ಷಿಕ ಮಹಾಸಭೆ ಮತ್ತು 2020-21 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ವಿಟ್ಲ ಬೊಬ್ಬೆಕ್ಕೇರಿಯ ಗಜಾನನ ಸಭಾ ಭವನದಲ್ಲಿ ನಡೆಯಿತು.

kk
ಈ ಕಾರ್ಯಕ್ರಮವನ್ನು ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಸುಭಾಷ್‍ಚಂದ್ರ ಶೆಟ್ಟಿ ಉದ್ಘಾಡಿಸಿದರು. ಸಂಘದ ಅಧ್ಯಕ್ಷ ಹರೀಶ್ ಎಸ್ ಪಿ ಸಭಾಧ್ಯಕ್ಷತೆ ವಹಿಸಿದ್ದರು. ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷೆ ದಮಯಂತಿ, ಉಪಾಧ್ಯಕ್ಷ ಜಯಂತ ನಾಯ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನೂತನ ಅಧ್ಯಕ್ಷ ಸುನಿಲ್ ರಾಜ್, ಉಪಾಧ್ಯಕ್ಷ ಲಕ್ಷ್ಮಣ ಪೂಜಾರಿ, ಕಾರ್ಯದರ್ಶಿ ಇಸ್ಮಾಯಿಲ್ ಅರಪ್ಪ, ಕೋಶಾಧಿಕಾರಿ ಸುಧೀರ್ ಯು ಬಿ ಜತೆಕಾರ್ಯದರ್ಶಿ ಆಲ್‍ಪೋನ್ಸ್ ಡಿ ಸೋಜಾ ಉಪಸ್ಥಿತರಿದ್ದರು.
ಸುಧೀರ್ ಸ್ವಾಗತಿಸಿದರು. ಸಂಜೀವ ಪೂಜಾರಿ ಪ್ರಸ್ತಾವಿಸಿದರು. ರಾಜೇಶ್ ವರದಿ ವಾಚಿಸಿದರು. ಉದಯಕುಮಾರ್ ದಂಬೆ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *