ಬಂಟ್ವಾಳ: ಸಜೀಪಮೂಡ ಗ್ರಾಮದ ಬೇಂಕ್ಯ ಜುಮಾದಿ ಬಂಟ ದೈವಸ್ಥಾನದ ಪುನರ್ ನಿರ್ಮಾಣ ಕಾರ್ಯಕ್ಕೆ ಬುಧವಾರ ಶಿಲಾನ್ಯಾಸ ನೆರವೇರಿಸಲಾಯಿತು.ವಾಸ್ತು ಶಾಸ್ತ್ರಜ್ಞ ಪ್ರಸಾದ್ ಭಟ್ ಮುನಿಯಂಗಳ ಅವರ ಮಾರ್ಗದರ್ಶನದಲ್ಲಿ ವಾಸ್ತು ಪ್ರಕಾರವಾಗಿ ಜೀರ್ಣೋದ್ಧಾರ ನಡೆಸಲಾಗುತ್ತಿದೆ.
ಸಜೀಪ ಮಾಗಣೆಯ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಅವರು ವೈಧಿಕ ವಿಧಿ ವಿಧಾನವನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಜಿಪಗುತ್ತು ಗಡಿ ಪ್ರಧಾನ ರಾದ ಮುಂಡಪ್ಪ ಶೆಟ್ಟಿ ಯಾನೆ ಕೋಚ್ ಭಂಡಾರಿ, ಬಿ. ಸದಾನಂದ ಪೂಂಜ , ಚಂದ್ರಶೇಖರ್ ನಾಯಕ್, ಅನುಪ್ ಆಳ್ವ, ಶಿವಪ್ರಸಾದ್ ಶೆಟ್ಟಿ, ದೇವಿ ಪ್ರಸಾದ್ ಪೂಂಜಾ , ಜೀವನ ಆಳ್ವ ಅಗರಿ, ಕಲ್ಲಾಡಿ ಗೂಳಿ, ರಾಘವೇಂದ್ರ ಐತಾಳ, ಜಯರಾಮಶೆಟ್ಟಿ ನಗ್ರಿಗುತ್ತು, ಸತೀಶ್ ಪೆರ್ಗಡೆ, ಮೊದಲಾದವರು ಉಪಸ್ಥಿತರಿದ್ದರು .
