ಬಂಟ್ವಾಳ:   ಪ್ರಕೃತಿಯನ್ನು ಪೂಜಿಸುವ,  ಮಹಿಳೆಯರಿಗೆ ದೇವತಾ ಸ್ಥಾನ ಕೊಟ್ಟ ದೇಶ ನಮ್ಮದಾಗಿದ್ದು, ದೇಶದ ಪ್ರಸ್ತುತ ವಿದ್ಯಮಾನದ ಬಗ್ಗೆ ಜಾಗೃತರಾಗಬೇಕಾದ ಅಗತ್ಯವಿದೆಯಲ್ಲದೆ  ದೈವ, ದೇವರಲ್ಲಿಯು ನಂಬಿಕೆ ಹುಟ್ಟಿಸುವಂತ ಕಾರ್ಯ ಆಗಬೇಕಾಗಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ  ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ ಬಂಟ್ವಾಳ ತಾಲೂಕಿನ ಅಮ್ಟೂರುಗ್ರಾಮದ ಕಟ್ಟೆಮಾರ್ ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿಧ್ಯದಲ್ಲಿ ಮಂತ್ರದೇವತೆಯ ಶಿಲಾಮೂರ್ತಿಯ ಪುನರ್ ಪ್ರತಿಷ್ಠಾ ಕಲಶಾಭಿಷೇಕದ ಧಾರ್ಮಿಕ ಸಭೆಯನ್ನು  ದೀಪ ಪ್ರಜ್ವಲಿಸಿ ಉದ್ಘಾಟಿಸಿ ಅವರು ಮಾತನಾಡಿದರು.
IMG_20200302_122747
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೋಹನ್ ರಾಜ ಚೌಟ ಪುಂಚೋಲಿಮಾರ್ ಗುತ್ತು ಅವರು ಮಾತನಾಡಿ, ನಮ್ಮ ಜೀವನ ನಂಬಿಕೆಯ ಮೇಲೆ ನಿಂತಿದ್ದು, ನಂಬಿಕೆ ಕಡಿಮೆಯಾದಾಗ ಅದು ಸಂಘರ್ಷಕ್ಕೆ ದಾರಿಯಾಗುತ್ತದೆ ಹಾಗಾಗಿ ಸಮಾಜದಲ್ಲಿ ನಂಬಿಕೆಯೇ ಮೂಲ ಎಂದರು. ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕರಾದ  ಎ ರುಕ್ಮಯ ಪೂಜಾರಿ ಮಾತನಾಡಿ, ಇಲ್ಲಿನ ಮಂತ್ರ ದೇವತಾ ಸಾನಿಧ್ಯ ಕೇವಲ ಒಂದು ಮನೆಗೆ ಸೀಮಿತವಾಗಿರದೆ ಎಲ್ಲರ ಆರಾಧನೆಯ ಸ್ಥಳವಾಗಬೇಕು ಎಂದು ಹಾರೈಸಿದರು.ಕ್ಷೇತ್ರದ ಪ್ರಮುಖರಾದ  ಮನೋಜ್ ಕುಮಾರ್ ಕಟ್ಟೆಮಾರ್ ಕ್ಷೇತ್ರದ ಕುರಿತಂತೆ ಪ್ರಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಬದನಾಡಿ ಶ್ರೀ ನಾಗಬ್ರಹ್ಮ ಸುಬ್ರಮಣ್ಯ ಭಜನಾ ಮಂಡಳಿ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ ಬದನಾಡಿ,ನಿವೃತ್ತ ಯೋಧರಾದ ವಿದ್ಯಾಧರ ಪೂಜಾರಿ,ಸಾಮಾಜಿಕ ಮುಖಂಡರಾದ ಅಶೋಕ್  ಕರ್ಕೇರಾ,ಉದ್ಯಮಿಗಳಾದ ವಿಜಯ ಬಂಗೇರ ಮುಂಬೈ,  ಸೀತಾರಾಮ ಮಂಗಳೂರು, ಹರೀಶ್ ಶೆಟ್ಟಿ ಮುಂಬೈ, ಜಗದೀಶ್ ಬಜ್ಜರ್ ಅಮ್ಟೂರ್, ಶೈಲೇಶ್ ಪೂಜಾರಿ ಕುಟ್ಟಿಗುಡ್ಡೆ, ಶೈಲೇಶ್ ಮೆಲ್ಕಾರ್, ಸಂತೋಷ ಪೂಜಾರಿ ಮುಂಬೈ, ಲಕ್ಷ್ಮಣ ಪೂಜಾರಿ ಇರುವೈಲ್,ಮಾಜಿ ತಾಪಂ ಉಪಾಧ್ಯಕ್ಷ ದಿನೇಶ್ ಅಮ್ಟೂರು ಮೊದಲಾದವರು ಉಪಸ್ಥಿತರಿದ್ದರು ಬಂಟ್ವಾಳ,ಉಪಸ್ಥಿತರಿದ್ದರು.ಇದೇವೇಳೆ  ತುಳು ನಿರೂಪಕರಾದ ದಿನೇಶ್ ಸುವರ್ಣ ರಾಯಿಇವರನ್ನು ಸನ್ಮಾನಿಸಲಾಯಿತು ನಾಗಮ್ಮ ಶಾಂತಿಪಲ್ಕೆ,  ಲೀಲಾವತಿ ರಾಯಪ್ಪಕೋಡಿ,  ಸೀತು ಪೊಯ್ಯೆಕಂಡ ಅಮ್ಟೂರ್ ,ಉಮೇಶ್ ತಾರಾಬರಿ ಅಮ್ಟೂರ್, ಲಿಂಗಪ್ಪ ಪೂಜಾರಿ ಕರಿಂಗಾಣ, ವೆಂಕಪ್ಪ ಶೆಟ್ಟಿಗಾರ್ ಅಮ್ಟೂರ್,  ಗಣೇಶ್ ಶೆಟ್ಟಿ ಬಾಳಿಕೆ, ಅಚ್ಚು ಪೆಲತಕಟ್ಟೆ ಸಜಿಪ. ಇವರಿಗೆ ಧನಸಹಾಯ ನೀಡಲಾಯಿತು.ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಅತಿಥಿ ಕಲಾವಿದರಿಂದ ಯಕ್ಷಗಾನ ಹಾಸ್ಯ ವೈಭವ , ಶ್ರೀ ಚಿಂತಾಮಣಿ ಡಾನ್ಸ್ ಗ್ರೂಪ್, ಮತ್ತು ಟೀಮ್  ಡಿವೈನ್ ಬಿ ಸಿ ರೋಡ್ ತಂಡದಿಂದ ಡಾನ್ಸ್ ಕಾರ್ಯಕ್ರಮ ನಡೆಯಿತು. ಮಾಜಿ ಜಿಪಂ ಸದಸ್ಯ ಆರ್. ಚೆನ್ನಪ್ಪ ಕೋಟ್ಯಾನ್  ಸ್ವಾಗತಿಸಿದರು, ವಸಂತ ಪೂಜಾರಿ, ಬಟ್ಟೆಹಿತ್ಲು ವಂದಿಸಿದರು, ದಿನೇಶ್ ಸುವರ್ಣ ರಾಯಿ ನಿರೂಪಿಸಿದರು.ಬಳಿಕ ಶ್ರೀ ಮಂತ್ರದೇವತೆ ಹಾಗೂ ಗುಳಿಗ ದೈವಗಳಿಗೆ ಕೋಲೋತ್ಸವ ಜರಗಿತು

By suddi9

Leave a Reply

Your email address will not be published. Required fields are marked *