ಸರಕಾರಿ ಪ್ರಥಮದರ್ಜೆಕಾಲೇಜು, ವಾಮದಪದವು ಇಲ್ಲಿ ಉಡುಪಿಯ ಉನ್ನತಿಕೆರಿಯಲ್ ಅಕಾಡೆಮಿ ಮತ್ತು ವೃತ್ತಿ ಮಾರ್ಗದರ್ಶನಕೇಂದ್ರ, ವಾಣಿಜ್ಯ ಮತ್ತು ನಿರ್ವಹಣಾ ಸಂಘ ಹಾಗೂ ಆಂತರಿಕಗುಣಮಟ್ಟ ಭರವಸಾ ಕೋಶಗಳ ಸಂಯುಕ್ತಾಶ್ರಮದಲ್ಲಿ “ಔದ್ಯೋಗಿಕ ಸಬಲೀಕರಣ: ಅವಕಾಶಗಳ ನವನವೀನ ಆಯಾಮಗಳು” ಎಂಬ ವಿಷಯದಕುರಿತಂತೆಅಂತಿಮ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿ/ನಿಯರಿಗಾಗಿ ಸಂವಾದಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರದ ಮುಖ್ಯ ಸಂಪನ್ಮೂಲ ವ್ಯಕ್ತಿ “ಶ್ರೀಮತಿ.ಸರಿತಾ” ರವರುಉದ್ಯೋಗ ಮಾರುಕಟ್ಟೆಯಆಶಾದಾಯಕ ಬೆಳವಣಿಗೆಗಳು, ಅವಕಾಶಗಳು ಮತ್ತು ವೃತ್ತಿಪರತೆಯ ವಿವಿಧ ಆಯಾಮಗಳ ಕುರಿತಂತೆ ಮನೋಜ್ಞವಾಗಿ ಸಂವಾದ ಮಂಡಿಸಿ, ವಿದ್ಯಾರ್ಥಿ/ನಿಯರ ಸವಾಲು-ಸಂದೇಹಗಳಿಗೆ ಪ್ರೇರಣಾತ್ಮಕ ಸಮಾಧಾನಗಳನ್ನು ಚರ್ಚಿಸಿದರು. ಪ್ರೊ. ಹರಿಪ್ರಸಾದ್ ಬಿ.ಶೆಟ್ಟಿಯವರುತಮ್ಮಅಧ್ಯಕ್ಷೀಯ ನುಡಿಗಳಲ್ಲಿ ಸ್ಪರ್ಧಾತ್ಮಕವಾದಔದ್ಯೋಗಿಕರಂಗದಲ್ಲಿನ ಯಶಸ್ಸಿಗೆ ವಿದ್ಯಾರ್ಥಿ/ನಿಯರಲ್ಲಿಆಸಕ್ತತೆ, ನಿರಂತರ ಪ್ರಯತ್ನ, ಅಧ್ಯಯನ ಮತ್ತುಜ್ಞಾನ ಪ್ರಬುದ್ಧತೆಗಳನ್ನು ಸಾಧನಗಳಾಗಿ ಬಳಸಿಕೊಳ್ಳುವ ಚಾಕಚಕ್ಯತೆಯೇ ಮೂಲ ಬುನಾದಿ ಎಂದುಕರೆ ನೀಡಿದರು. ಡಾ.ರವಿ.ಎಂ.ಎನ್, ಪ್ರೊ.ಚಂದ್ರಕಾಂತ ಶೆಣೈ ಮತ್ತು ಪ್ರೊ.ಅಶೋಕಕುಮಾರ ಬಾವಿಕಟ್ಟಿರವರು ಉಪಸ್ಥಿತರಿದ್ದರು.ಅಂತಿಮ ಬಿಕಾಂ. ವಿದ್ಯಾರ್ಥಿನಿಯರಾದಕುಮಾರಿ ಸಂಧ್ಯಾ ಪ್ರಾರ್ಥಿಸಿ ಮತ್ತುಕುಮಾರಿ ಭವ್ಯರವರುಕಾರ್ಯಕ್ರಮ ನಿರೂಪಿಸಿದರು.
