ಕಲ್ಲಡ್ಕ :ಶ್ರೀರಾಮ ಹಿರಿಯಪ್ರಾಥಮಿಕ ಶಾಲೆಯ ವೇದವ್ಯಾಸಧ್ಯಾನಮಂದಿರದಲ್ಲಿ ಭಾರತೀಯ ಭೌತಶಾಸ್ತ್ರಜ್ಞ ಸರ್ ಸಿ.ವಿರಾಮನ್‍ರವರು ಆವಿಷ್ಕರಿಸಿದ ರಾಮನ್ ಪ್ರಭಾವದ ದಿನವನ್ನುಗುರುತಿಸುವ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ”ಯನ್ನುಆಚರಿಸಲಾಯಿತು .

“ಹಿಂದಿನಿಂದಲೂ ವಿಜ್ಞಾನವು ಭಾರತೀಯರಜೀವನದಲ್ಲಿ ಹಾಸುಹೊಕ್ಕಾಗಿದೆ.ನಮ್ಮ ಭಾರತೀಯರ ಪರಂಪರೆಯಲ್ಲಿ ಹಲವು ಪದ್ಧತಿಗಳಿವೆ. ಇದನ್ನು ಮೂಢನಂಬಿಕೆಯೆಂದುಕಡೆಗಣಿಸದೆ, ಅದರ ವೈಜ್ಞಾನಿಕ ಮೂಲವನ್ನು ಹುಡುಕಬೇಕಾಗಿದೆ.ವೈಜ್ಞಾನಿಕಚಿಂತನೆಯೊಂದಿಗೆಎಲ್ಲರೂ ವಿಜ್ಞಾನಿಗಳಾಗಿ”ಎಂದು ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ವಿಜ್ಞಾನಅಧ್ಯಾಪಕರಾದ ಗೋಪಾಲ್ ಶ್ರೀಮಾನ್ ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ಅಗಮಿಸಿದ ಅತಿಥಿಗಳಿಗೆ “ಗಿಡವನ್ನು ಬೆಳೆಸಿ , ಪರಿಸರವನ್ನು ಉಳಿಸಿ “ ಎಂಬ ಧ್ಯೇಯದೊಂದಿಗೆ ಗಿಡವನ್ನು ನೀಡಿ ಸ್ವಾಗತಿಸಲಾಯಿತು .ಕಾರ್ಯಕ್ರಮವನ್ನು ಶಾಲೆಯ ವಿದ್ಯಾರ್ಥಿಗಳಾದ ಭರತ್ ರಾಜ್ ಮತ್ತು ಶ್ರವಣ್ ರವರ ವೈಜ್ಞಾನಿಕ ಮಾದರಿಯ ಮೂಲಕ ಅತಿಥಿಗಳು ಉದ್ಘಾಟಿಸಿದರು.ವಿದ್ಯಾರ್ಥಿಗಳು ವಿಜ್ಞಾನಕ್ಕೆ ಸಂಬಂಧ ಪಟ್ಟ ರಂಗೋಲಿ ಬಿಡಿಸಿದರು. ಹಾಗೂ ವಿಜ್ಞಾನ ಪ್ರಯೋಗಗಳು, ವಿಜ್ಞಾನಿಗಳು ಮತ್ತು ಸಂಶೋಧನೆಯ ಪರಿಚಯ, ವಿಜ್ಞಾನಿಗಳ ಹೆಸರುಗಳ ಜುಗಲ್ ಬಂಧಿ, ಪರಿಸರ ಗೀತೆ ಮತ್ತು ಭಾಷಣ ಕಾರ್ಯಕ್ರಮಗಳು ನಡೆದವು. ವಿಜ್ಞಾನದ ಪರಿಕರಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ವೇದಿಕೆಯಲ್ಲಿ 15 ಭಾರತೀಯ ವಿಜ್ಞಾನಿಗಳ ಛಾಯಚಿತ್ರಗಳನ್ನು ಪ್ರದರ್ಶಿಸಿದ್ದು ಕಾರ್ಯಕ್ರಮದ ವಿಶೇಷತೆಯಾಗಿದೆ. ನಂತರ ದಾಸವಾಳದಿಂದ ತಯಾರಿಸಿದ ದೇಶಿಯ ಪಾನೀಯವನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಶ್ರೀರಾಮ ಪದವಿ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ಉಪನ್ಯಾಸಕಿ ವಿದ್ಯಾಶ್ರೀ, ಪದವಿಪೂರ್ವ ವಿಭಾಗದ ವಿಜ್ಞಾನ ಉಪನ್ಯಾಸಕಿ ರಮ್ಯಶ್ರೀ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರುಕಾರ್ಯಕ್ರಮವನ್ನು ಶಾಲಾ ನಾಯಕ ದೀಕ್ಷಿತ್ ನಿರೂಪಿಸಿ, ಹೇಮಂತ್ ಸಿಎಚ್. ಸ್ವಾತಿಸಿ ಕಿಶನ್ ವಂದಿಸಿದರು.
