ತುಂಬೆ :ಯಶಸ್ವೀ ಬದುಕಿನಆರಂಭದಜೀವನವೇ ವಿದ್ಯಾರ್ಥಿಜೀವನ. ವಿದ್ಯಾರ್ಥಿಜೀವನದಲ್ಲಿಯಶಸ್ಸು ಗಳಿಸಿದರೆ ಭವಿಷ್ಯದಲ್ಲಿಯಶಸ್ಸು ಸಿಗುತ್ತದೆ.ಜೀವನದಲ್ಲಿ ಪರೀಕ್ಷೆಗಳು ಎದುರಾಗುವಂತೆ, ವಿದ್ಯಾರ್ಥಿಜೀವನದಲ್ಲೂ ಪರೀಕ್ಷೆಗಳಿವೆ.ಆದರೆ ವಿದ್ಯಾರ್ಥಿಜೀವನದಲ್ಲಿ ಬೋಧಕರು ಕಲಿಸಿದ್ದನ್ನು ಅರಿತು ಜೀರ್ಣಿಸಿಕೊಂಡು ಕೊಟ್ಟ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಿ ಸಾಧನೆಯನ್ನುತೋರಿಸುವುದಾಗಿದೆಎಂಬುದಾಗಿರಾಜ್ಯ ಮಟ್ಟದಖ್ಯಾತತರಬೇತುದಾರರೊ| ಬಿ.ರಾಮಚಂದ್ರರಾವ್ ಹೇಳಿದರು.

SSLC AND SECOND PUC EXAM TRAINING PHOTOಅವರು ಮಾತನಾಡುತ್ತ ನಮ್ಮ ಬದುಕಿನಲ್ಲಿಅಸಾಧ್ಯಎನ್ನುವುದುಯಾವುದೂಇಲ್ಲ. ಮನಸ್ಸಿಟ್ಟು ಕಾರ್ಯ ಪ್ರವೃತ್ತರಾದಾಗಎಲ್ಲ ಕೆಲಸ ಕಾರ್ಯಗಳೂ ಸಾಧ್ಯವಾಗುತ್ತದೆಎಂದು ಹೇಳಿದರು.ಅವರುತುಂಬೆ ಪದವಿ ಪೂರ್ವಕಾಲೇಜಿನ ಶಬನಾ ಬ್ಲಾಕ್‍ನಲ್ಲಿ ನಡೆದ ಬಂಟ್ವಾಳ ರೋಟರಿಕ್ಲಬ್‍ಟೌನ್ ಹಾಗೂ ಬಂಟ್ವಾಳ ರೋಟರಿಆ್ಯನ್ಸ್ ಸಂಸ್ಥೆಗಳು ಜಂಟಿಯಾಗಿಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ‘ ಪರೀಕ್ಷೆಎದುರಿಸುವುದು ಹೇಗೆ ? ‘ ಎಂಬ ಸಂವಾದಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.ಅದೇ ಸಂದರ್ಭದಲ್ಲಿಬಂಟ್ವಾಳ ರೋಟರಿಆ್ಯನ್ಸ್‍ಇವರಿಂದ ಸಂಸ್ಥೆಗೆ ಪ್ರಥಮಚಿಕಿತ್ಸೆಯಕಿಟ್ಟ್‍ನ್ನು ನೀಡಲಾಯಿತು.ಕಾರ್ಯಕ್ರಮದಲ್ಲಿ ಮೊದಲಿಗೆರೊಟೇರಿಯನ್‍ಜಯರಾಜ್‍ಎಸ್. ಬಂಗೇರ ಶುಭ ಹಾರೈಸಿ ಚಾಲನೆ ನೀಡಿದರು.ಸಮಾರಂಭದಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದಶ್ರೀ ಕೆ.ಎನ್. ಗಂಗಾಧರ ಆಳ್ವ ಮಾತನಾಡಿ, ಇನ್ನುಳಿದ ಕೆಲವೇ ದಿನಗಳು ಕ್ರಿಕೆಟ್ ಪಂದ್ಯಾಟದಅಂತಿಮಘಟ್ಟದಲ್ಲಿ ಗೆಲುವು ಸಾಧಿಸುವುದು ಹೇಗೆ ಎಂಬುದಾಗಿಕೋಚ್‍ಗೈಡ್ ಮಾಡುವಂತೆ, ಈ ಕೊನೆಯ ಹಂತದ ಪರೀಕ್ಷಾತರಬೇತಿಕಾರ್ಯಗಾರ ನಿಜಕ್ಕೂ ವಿದ್ಯಾರ್ಥಿಗಳ ಮನಸ್ಸಿನಾಳಕ್ಕೆ ಇಳಿದು ಪ್ರಯೋಜನವಾಗುತ್ತದೆಎಂದರು.
ರೊ| ಆ್ಯನ್ಸ್ ವಿಂದ್ಯಾಎಸ್. ರೈ, ರೊ| ಬೊಂಡಾಳ ಚಿತ್ತರಂಜನ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಸಹಶಿಕ್ಷಕ ನವೀನ ರಾವ್ ಟಿ. ವಂದಿಸಿದರು. ವಿದ್ಯಾರ್ಥಿನಿ ಚಂದನ ಕೊಪ್ಪಳ ನಿರೂಪಿಸಿದರು. ಶ್ರೀ ಸುಬ್ರಹ್ಮಣ್ಯ ಭಟ್, ಶ್ರೀ ದಿನೇಶ ಶೆಟ್ಟಿ ಅಳಿಕೆ, ಶ್ರೀ ವಿಶ್ವನಾಥ ಪೂಜಾರಿ, ಸಾಯಿರಾಂ ನಾಯಕ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *