ಕೈಕಂಬ:ಬಂಟ್ವಾಳ ತಾಲೂಕಿನ ಪಂಚಗ್ರಾಮ ಬ್ರಹ್ಮ ಶ್ರೀ ಗುರುನಾರಾಯಣ ಮಂದಿರದಿಂದ ಫೆ. 25ರಂದು ಮಂಗಳವಾರ ಶ್ರೀ ಕ್ಷೇತ್ರಗೆಜ್ಜೆಗಿರಿಗೆ ಹೊರೆಕಾಣಿಕೆಯನ್ನು ಬಹಳ ವಿಜೃಂಭಣೆಯಿಂದ ಶ್ರೀಕ್ಷೇತ್ರಕ್ಕೆ ತಲುಪಿಸಲಾಯಿತು.
ಪಂಚಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರುಮಂದಿರದಲ್ಲಿ ಪೂಜೆ ನೆರವೇರಿಸಿದ ಬಳಿಕ ಬಡಗಬೆಳ್ಳೂರು, ಕರಿಯಂಗಳ, ತೆಂಕಬೆಳ್ಳೂರು, ಅಮ್ಮುಂಜೆ, ಕೂರಿಯಾಳ ಗ್ರಾಮಗಳಿಂದ ಬಂದ ಹೊರೆಕಾಣಿಕೆಗೆ ಚಾಲನೆ ನೀಡಲಾಯಿತು. ಬಿಲ್ಲಿವ ಪಂಚಗ್ರಾಮದ ಅಧ್ಯಕ್ಷ ಭಾರತ್ ಬ್ಯಾಂಕ್ ನಿರ್ದೇಶಕ ಗಂಗಾಧರ ಪೂಜಾರಿ ಹಾಗೂ ತಾಚಪ್ಪ ಪೂಜಾರಿ, ದೇವಪ್ಪ ಪೂಜಾರಿ, ಯಶವಂತ ಪೂಜಾರಿ,ರೋಶನ್ ಪುಂಚಮೆ, ರಾಜು ಕೋಟ್ಯಾನ್ , ಉಮೇಶ್ ಪೂಜಾರಿ, ನಾಗೇಶ್ ಪೂಜಾರಿ ಹಾಗೂ ಪಂಚಗ್ರಾಮದ ಸರ್ವಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಹೊರೆಕಾಣಿಕೆಯನ್ನು ಭಕ್ತಿಪೂರ್ವಕವಾಗಿ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಸಮರ್ಪಿಸಲಾಯಿತು. ಶ್ರೀ ಕ್ಷೇತ್ರ ಗೆಜ್ಜೆಗಿರಿ ಬ್ರಹ್ಮಕಲಶೋತ್ಸವ ಸಮಿತಿಯ ಡಾ.ರಾಜಶೇಖರ ಕೋಟ್ಯಾನ್, ಪೀತಾಂಬರ ಹೇರಾಜೆ, ಯಶವಂತ ದೇರಾಜೆ, ಸತ್ಯಜಿತ್ ಸುರತ್ಕಲ್ ದೀಪಕ್ ಕೋಟ್ಯಾನ್ ಆತ್ಮೀಯವಾಗಿ ಸ್ವಾಗತಿಸಿದರು.



