ಕೈಕಂಬ : ಒಡ್ಡೂರು ಫಾಮ್೯ ಹೌಸ್ ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಧರ್ಮಚಾವಡಿಯಲ್ಲಿ ಶ್ರೀ ಕೊಡಮಣಿತ್ತಾಯ ಧರ್ಮದೈವದ ಪ್ರತಿಷ್ಠೆ, ಧರ್ಮ ನೇಮೋತ್ಸವ ಹಾಗೂ ಶತಚಂಡಿಕಾಯಾಗ ವಿವಿಧ ಧಾರ್ಮಿಕ ವಿಧಿವಿಧಾನಗಳಿಗೆ ಫೆ.24 ಸೋಮವಾರದಿಂದ ಫೆ.29 ರಂದು ನಡೆಯಲಿರುವ ಶತಚಂಡಿಕಾಯಾಗ ಮತ್ತು ಧರ್ಮನೇಮೋತ್ಸವಕ್ಕೆ ಸಕಲ ಸಿದ್ದಗೊಂಡಿದೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಹಲವು ಮಂತ್ರಿಗಳು ಭಾಗವಹಿಸುವರು.

ಶಾಸಕರ ಕುಟುಂಬಿಕರು ಆರಾಧಿಸಿಕೊಂಡು ಬರುತ್ತಿರುವ ಕೊಡಮಣಿತ್ತಾಯ ದೈವಕ್ಕೆ ಧರ್ಮಚಾವಡಿಯನ್ನು (ಭಂಡಾರಮನೆ) ನಿರ್ಮಿಸಲಾಗಿದ್ದು, ಫೆ.28 ರ ಶುಕ್ರವಾರ ಪೂರ್ವಾಹ್ನ ಧರ್ಮ ದೈವದ ಪ್ರತಿಷ್ಠೆಯ ವಿವಿಧ ಧಾರ್ಮಿಕ ಕಾರ್ಯಗಳ ಜೊತೆಗೆ ಸೂರ್ಯೋದಯದಿಂದಲೇ ವಿವಿಧ ಭಜನಾ ತಂಡಗಳ ಭಜನಾ ಕಾರ್ಯ ಆರಂಭವಾಗಲಿದ್ದು, ಮಾರನೇ ದಿನದ ಸೂರ್ಯೋದಯದ ತನಕ ನಿರಂತರವಾಗಿ 23 ಭಜನಾತಂಡಗಳು ಭಾಗಿಯಾಗಲಿದೆ.
ಫೆ.29 ರಂದು ಪೂರ್ವಾಹ್ನ ಶತಚಂಡಿಕಾಯಾಗ ಆರಂಭವಾಗಿ 11.30 ಕ್ಕೆ ಪೂರ್ಣಾಹುತಿಯಾಗಲಿದೆ. ಎಡಪದವು ವೆಂಕಟೇಶ್ ತಂತ್ರಿಯವರ ನೇತೃತ್ವ,ರತೀಶ್ ಭಟ್ ಮತ್ತವರ ತಂಡದ ಪೌರೋಹಿತ್ವದಲ್ಲಿ ಶತಚಂಡಿಕಾಯಾಗ,ಧರ್ಮದೈವದ ಪ್ರತಿಷ್ಠಾ ಕಾರ್ಯನಡೆಯಲಿದೆ. ಶತಚಂಡಿಕಾಯಾಗಕ್ಕೆ ಶಾಸಕರ ನಿವಾಸದ ಬಲಭಾಗದಲ್ಲಿ ಧರ್ಮಚಾವಡಿ, ಮುಂಭಾಗದಲ್ಲಿ ಬೃಹತ್ ಗಾತ್ರದ ಹೋಮಕುಂಡ ನಿರ್ಮಿಸಲಾಗಿದೆ.ಮೈದಾನದಲ್ಲಿ ಸಾಂಸ್ಖೃತಿಕ ಕಾರ್ಯಕ್ರಮಕ್ಕೆ ಪ್ರತ್ಯೇಕವಾದ ವೇದಿಕೆಯನ್ನು ನಿರ್ಮಿಸಲಾಗಿದ್ದು, ನಿರಂತರ ಉಪಹಾರ,ಅನ್ನಸಂತರ್ಪಣೆಗೂ ಪ್ರತ್ಯೇಕ ಅನ್ನಛತ್ರದ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ವಾಹನಪಾರ್ಕಿಂಗ್ ಗೂ ವಿಶಾಲವಾದ ಮೈದಾನದ ವ್ಯವಸ್ಥೆ ಕಲ್ಲಿಸಲಾಗಿದೆ.ಬಂಟ್ವಾಳ , ಪೊಳಲಿ,ಮಳಲಿ ಹಾಗೂ ಸ್ಥಳೀಯರು ಸಹಿತ ಸುಮಾರು 3000 ಸ್ವಯಂಸೇವಕರು ಇಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ: ಅಂದು ಮಧ್ಯಾಹ್ಮ 2 ರಿಂದ ರಾತ್ರಿ 9 ಗಂಟೆಯ ತನಕ ಯಕ್ಷಗಾನ ವೈಭವ, ಪ್ರಶಂಸ ತಂಡದ ಹಾಸ್ಯ, ಜಾನಪದ ಕಾರ್ಯಕ್ರಮಗಳ ಸಹಿತ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9 ಗಂಟೆಯಿಂದ ಶ್ರೀ ಕೊಡಮಣಿತ್ತಾಯ ದೈವಕ್ಕೆ ಧರ್ಮ ನೇಮೋತ್ಸವ ನಡೆಯಲಿದೆ ಎಂದು ರಾಜೇಶ್ ನಾಯ್ಕ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಹಿತ ಮಂತ್ರಿ-ಶಾಸಕದ್ವಯರುಭಾಗವಹಿಸಲಿದ್ದಾರೆ:
ಶತಚಂಡಿಕಾ ಯಾಗ ಹಾಗೂ ಧರ್ಮ ನೇಮೋತ್ಸವಕ್ಕೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ,ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ,ಡಾ.ಆಶ್ವಥ ನಾರಾಯಣ ಅವರು ಶತಚಂಡಿಕಾಯಾಗ ಪೂರ್ಣಾಹುತಿಯ ಸಂದರ್ಭ ಧರ್ಮ ಚಾವಡಿಗೆ ಭೇಟಿ ನೀಡಲಿದ್ದಾರೆ. ಹಾಗೆಯೇ ಸಚಿವರುಗಳಾದ ಬಸವರಾಜ್ ಬೊಮ್ಮಾಯಿ,ಡಾ.ಸುಧಾಕರ್,ಆರ್ ಆಶೋಕ್, ಭೈರತಿಸುರೇಶ್,ನಾರಾಯಣಗೌಡ ಸಹಿತ ಹತ್ತಕ್ಕೂ ಅಧಿಕ ಮಂತ್ರಿಗಳು, ಉಭಯ ಸದನಗಳ ಸಭಾಧ್ಯಕ್ಷರು, 40ಕ್ಕೂ ಅಧಿಕ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹಾಗೆಯೇ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರಹೆಗ್ಗಡೆ ಅವರು ಶತಚಂಡಿಕಾಯಾಗ, ಧರ್ಮಚಾವಡಿಗೆ ಭೇಟಿ ನೀಡುವ ನಿರೀಕ್ಷೆ ಇದೆ.

ಫೆ.26ರಂದು ಸಚಿವರ ಭೇಟಿ:
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಇಂದು(ಬುಧವಾರ) ಒಡ್ಡೂರು ಧರ್ಮಚಾವಡಿಗೆ ಭೇಟಿ ನೀಡಲಿದ್ದಾರೆ.
50 ಸಾವಿರಕ್ಕೂ ಅಧಿಕ ಜನಸ್ತೋಮದ ನಿರೀಕ್ಷೆ:
ಧರ್ಮ ನೇಮೋತ್ಸವದ ದಿನದ ಕಾರ್ಯಕ್ರಮಕ್ಕೆ ತಾಲೂಕು ಸಹಿತ ಜಿಲ್ಲೆಯ ವಿವಿಧೆಡೆಯಿಂದ 50 ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಸೂಕ್ತ ಸಿದ್ಧತೆಗಳನ್ನು ನಡೆಸಲಾಗಿದೆ. ನಿರಂತರ ಉಪಹಾರ, ಅನ್ನ ಸಂತರ್ಪಣೆಯ ಕಾರ್ಯಗಳು ಸೋಮವಾರದಿಂದಲೇ ಆರಂಭವಾಗಿದ್ದು,ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಭಕ್ತರು ಅಗಮಿಸುತ್ತಿದ್ದಾರೆ.

ಉಚಿತ ಬಸ್ ವ್ಯವಸ್ಥೆ :
ಶತಚಂಡಿಕಾಯಾಗ ಹಾಗೂ ಧರ್ಮನೇಮೋತ್ಸವದ ದಿನ ಒಡ್ಡೂರು ಧರ್ಮ ಚಾವಡಿಗೆ ಆಗಮಿಸುವ ಭಕ್ತಾಧಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಬಿ.ಸಿ.ರೋಡು ರಕ್ತೇಶ್ವರಿ ದೇವಸ್ಥಾನ ಹಾಗೂ ಪೊಳಲಿ ಸಮೀಪದ ಕೈಕಂಬದಿಂದ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ರಾಜೇಶ್ ನಾಯ್ಕ್ ಅವರು ಮನವಿ ಮಾಡಿದ್ದಾರೆ.