ಕುಪ್ಪೆಪದವು: ಮಂಗಳೂರು ಉತ್ತರ ಕ್ಷೇತ್ರದ ಹೆಚ್ಚಿನ ಎಲ್ಲಾ ಸರಕಾರಿ ಶಾಲೆಗಳಿಗೆ ಅವಶ್ಯ ವಿರುವ ಸೌಲಭ್ಯಗಳನ್ನು ಒದಗಿಸಿ ಕೊಡುವ ಜತೆಯಲ್ಲಿ ಡಿಜಿಟಲ್ ಕಲಿಕಾ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ ಅವರು ಮಂಗಳವಾರ ಕುಪ್ಪೆಪದವು ಕಲ್ಲಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂ ಆರ್ ಪಿ ಎಲ್ ನ  ನಿಧಿಯಿಂದ ಮಂಜೂರಾದ 15 ಲಕ್ಷ ಅನುದಾನದಲ್ಲಿ ನಿರ್ಮಿಸಲಾದ ಮುಖ್ಯ ಶಿಕ್ಷಕರ ಕೊಠಡಿ ಮತ್ತು ಶೌಚಾಲಯ ಉದ್ಘಾಟನೆ ಮತ್ತು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು ಸರಕಾರದ ಅನುದಾನ ಕಡಿಮೆ ಇರುವುದರಿಂದ ಎಂ ಆರ್ ಪಿ ಎಲ್ ಮತ್ತು ಇತರ ಸಂಸ್ಥೆಗಳ ಸಹಯೋಗದಲ್ಲಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ.

IMG-20200225-WA0009

ಎಂ ಆರ್ ಪಿ ಎಲ್ ಸಂಸ್ಥೆಯ ಅಖS ನಿಧಿಯಿಂದ ಹೆಚ್ಚಿನ ಶಾಲೆಗಳಿಗೆ ಗೆ ಕಟ್ಟಡ,ಶೌಚಾಲ ಯ ಗಳನ್ನು ನಿರ್ಮಿಸಲಾಗಿದೆ,ಅಲ್ಲದೆ ರೋಟರಿ ಯ ಸಹಯೋಗದಲ್ಲಿ ಹೆಚ್ಚಿನ ಶಾಲೆಗಳಲ್ಲಿ ಡಿಜಿಟಲ್ ಕಲಿಕೆ ಬೇಕಾದ ವ್ಯವಸ್ಥೆಗಳನ್ನು ಮಾಡಲಾಗಿದೆ ಇದಕ್ಕೆ ಬೇಕಾದ ಪರಿಕರಗಳನ್ನು ಒದಗಿಸಿದ್ದು ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ ಗಳ ಮೂಲಕ ಮನೆಯಲ್ಲಿ ಡಿಜಿಟಲ್ ಕಲಿಕೆಗೆ ಉತ್ತೇಜನ ನೀಡಲಾಗಿದೆ ಎಂದರು ಜಿಲ್ಲಾಪಂಚಾಯತ್ ಸದಸ್ಯ ಜನಾರ್ಧನ ಗೌಡ ಮುಚ್ಚೂರು,ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಮುತ್ತೂರು,ಎಂ ಆರ್ ಪಿ ಎಲ್ ನ ಸಿ ಸಿ ಸೆಕ್ಟರ್ ಜನರಲ್ ಮ್ಯಾನೇಜರ್ ರುಡಾಲ್ಫ್ ವಿ.ಜಿ.ನೊರೊನ್ನ್ಹ,ಸಭೆಯಲ್ಲಿ ಮಾತನಾಡಿದರು.

IMG-20200225-WA0010ಕುಪ್ಪೆಪದವು ಪಂಚಾಯತ್ ಅಧ್ಯಕ್ಷೆ ಲೀಲಾವತಿ ಆನಂದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಉಪಾಧ್ಯಕ್ಷ ಡಿ.ಪಿ.ಹಮ್ಮಬ್ಬ,ಸದಸ್ಯರಾದ ಅಬೂಬಕ್ಕರ್ ಕಲ್ಲಾಡಿ,ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಅರುಣಾ ಭಾಸ್ಕರ್ ಶೆಟ್ಟಿ ಬಾರ್ದಿಲ,ಸಮಿತಿಯ ಸದಸ್ಯರು ,ನಿವೃತ್ತ ಮುಖೋಪಾಧ್ಯಾಯ ಶ್ರೀನಿವಾಸ್,ನಿವೃತ್ತ ಗ್ರಾಮಕರಣಿಕ ರುಕ್ಮಯ ನಾಯ್ಕ್ ಕಲ್ಲಾಡಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು,ಗಜಾನನ ಕನ್ಸ್ಟ್ರಕ್ಷನ್ಸ್ ನ ಮಾಲಕ ಜಗದೀಶ್ ಕುಳಾಲ್ ಪಾಕಜೆ, ಮಕ್ಕಳ ಪೋಷಕರು,ಊರಿನ ಪ್ರಮುಖರು,ಹಿರಿಯರು ಸಮಾರಂಭದಲ್ಲಿ ಹಾಜರಿದ್ದರು.ಮುಖ್ಯಶಿಕ್ಷಕಿ ಮೆರೀವಾಜ್ ಸ್ವಾಗತಿಸಿದರು.ಶಿಕ್ಷಕಿಯರಾದ ಮೋಹಿನಿ ನಿರೂಪಿಸಿ ,ಮಾರ್ಗರೇಟ್ ಎಂ.ವಂದಿಸಿದರು.

By Suddi9

Leave a Reply

Your email address will not be published. Required fields are marked *