ಬೆಳ್ತಂಗಡಿ:  ದಿನಾಲೂ ಕುಡಿದು ಬರುತ್ತಾರೆಂದು ಬುದ್ದಿಯ ಕೈಗೆ ಕೋಪವನ್ನು ಕೊಟ್ಟ ಮಗ ನೋರ್ವ ತಂದೆಯನ್ನು ಕತ್ತಿಯಿಂದ ಬರ್ಬರವಾಗಿ ಕಡಿದು ಕೊಂದ ಘಟನೆ ಬೆಳ್ತಂಗಡಿ ತಾಲೂಕಿನ ಮದ್ದಡ್ಕದಲ್ಲಿ ಇಂದು ನಡೆದಿದೆ. ಕೊಲೆಗೀಡಾದ ವೃದ್ದ ತಂದೆಯನ್ನು ಮುಹಮ್ಮದ್(55) ಎಂದು ಗುರುತಿಸಲಾಗಿದ್ದು, ಅವರನ್ನು ಕತ್ತಿಯಿಂದ ಕೊಂದ ಮಗನನ್ನು ಸದ್ದಾಂ ಎಂದು ಗುರುತಿಸಲಾಗಿದೆ.


beltangadi murder (2)

beltangadi murder (4)



beltangadi murder (3)

 

 

ಘಟನೆಯ ವಿವರ: ದಿನಾಲು ಕುಡಿದು ಬರುತ್ತಿದ್ದ ಮುಹಮ್ಮದ್ ಹಾಗೂ ಅವರ ಪುತ್ರ ಸದ್ದಾಂ ಮಧ್ಯೆ ಪ್ರತಿದಿನ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ನಿನ್ನೆಯೂ ಮುಹಮ್ಮದ್ ಕುಡಿದು ಬಂದಿದ್ದರು ಎನ್ನಲಾಗಿದ್ದು ಇದರಿಂದ ಮನೆಯಲ್ಲಿ ಗಲಾಟೆ ನಡೆಸಿದ್ದರು.  ಇದರಿಂದ ಕುಪಿತನಾದ ಮಗ ಮನೆಯಲ್ಲಿದ್ದ ಕತ್ತಿಯಿಂದ ತಂದೆಯ ಕುತ್ತಿಗೆಗೆ ಕಡಿದಿದ್ದಾನೆ. ಮಗನ ಬಲವಾದ ಹೊಡೆತಕ್ಕೆ ತಂದೆ ಪ್ರಾಣ ಕ್ಷಣಾರ್ಧದಲ್ಲಿ ಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *