ಕೈಕಂಬ:ಒಡ್ಡೂರು ಫಾರ್ಮ್ ಹೌಸ್‍ನಲ್ಲಿ ನೂತನವಾಗಿ ನಿರ್ಮಿಸಲಾದ ಧರ್ಮಚಾವಡಿಯಲ್ಲಿ(ಭಂಡಾರಮನೆ) ಫೆ. 29ರಂದು ಶ್ರೀ ಕೊಡಮಣಿತ್ತಾಯ ಧರ್ಮದೈವದ ಪ್ರತಿಷ್ಠಾಪನೆ, ಸಾನಿಧ್ಯ ಕಲಶಾಭಿಷೇಕ ಹಾಗೂ ಫೆ. 24ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಶುಕ್ರವಾರ ಒಡ್ಡೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು.

press meet

ಫೆ.21ರಂದು ಶುಕ್ರವಾರ ಬಂಟ್ವಾಳ ಶಾಸಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಒಡ್ಡೂರು ಫಾರ್ಮ್ ಹಾಸ್‍ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಧರ್ಮನೇಮೋತ್ಸವಕ್ಕೆ ಬಂಟ್ವಾಳ ಹಾಗೂ ಮಂಗಳೂರು ಪ್ರದೇಶದಿಂದ 30 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಇದೆ. ಅಂದು ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕೆಲವು ಶಾಸಕರು, ಗಣ್ಯರು, ಅಧಿಕಾರಿಗಳು ಆಗಮಿಸಲಿದ್ದಾರೆ. ಧರ್ಮ ನೇಮೋತ್ಸವಕ್ಕೆ ಈಗಾಗಲೇ ಸಕಲ ಸಿದ್ಧತೆ ನಡೆದಿದೆ ಎಂದರು. ದೇವದಾಸ ಶೆಟ್ಟಿ ಬಂಟ್ವಾಳ ಸ್ವಾಗತಿಸಿದರು. ವೇದಿಕೆಯಲ್ಲಿ ಭಂಡಾರಮನೆ ನಿರ್ಮಾಣ ಮೇಲುಸ್ತುವಾರಿಯ ಮುರಳೀಧರ ಶೆಟ್ಟಿ ಇದ್ದರು.

ಕಾರ್ಯಕ್ರಮಗಳು :

ಫೆ. 24ರಂದು ಬೆಳಿಗ್ಗೆ 8:30ರಿಂದ ಆದ್ಯ ಗಣಪತಿ ಪೂಜೆ, ಉಗ್ರಾಣ ಮುಹೂರ್ತ, ಸಂಜೆ 5ರಿಂದ ಮಹಾಸುದರ್ಶನ ಯಾಗ, ವಾಸ್ತುಪೂಜೆ, ಫೆ. 25ರಂದು 49 ತೆಂಗಿನಕಾಯಿ ಅಷ್ಟದ್ರವ್ಯ ಗಣಪತಿ ಯಾಗ, ಸತ್ಯನಾರಾಯಣ ಪೂಜೆ, ಫೆ. 26ರಂದು ಪೂರ್ಣಮಾನ ನವಗ್ರಹ ಯಾಗ, ಸಾಯಂಕಾಲ ದೇವಿ ಮಹಾತ್ಮ್ಯೆ ಪಾರಾಯಣ, ಫೆ. 27ರಂದು ಮೃತ್ಯುಂಜಯ ಯಾಗ, ಧರ್ಮಚಾಮಡಿಯಲ್ಲಿ ಸಪ್ತಶುದ್ಧಿ ಪ್ರಾಸಾದಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಬಲಿ, ದೈವದ ಮಂಚ ಬಿಂಬ ಶುದ್ಧಿ ಅಧಿವಾಸ, ಫೆ. 28ರಂದು ಸೂರ್ಯೋದಯದಿಂದ ಮರುದಿನ ಸೂರ್ಯೋದಯದವರೆಗೆ 23 ಭಜನಾ ತಂಡಗಳಿಂದ ಭಜನೆ ಹಾಗೂ ಬೆಳಿಗ್ಗೆ 8:04ಕ್ಕೆ ಧರ್ಮದೈವ ಪ್ರತಿಷ್ಠೆ, 108 ಕಲಶಾಧಿವಾಸ, ಪ್ರಧಾನ ಹೋಮ ನಡೆಯಲಿದೆ.ಫೆ. 29ರಂದು ಬೆಳಿಗ್ಗೆ 6ರಿಂದ ಶತಚಂಡಿಕಾಯಾಗ, 11:30ಕ್ಕೆ ಧರ್ಮನೇಮಕ್ಕೆ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಏರಲಿದೆ. ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ ಮಧ್ಯಾಹ್ನ 2ರಿಂದ ರಾತ್ರಿ 9ರವರೆಗೆ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ವೈಭವ ಹಾಗೂ ರಾತ್ರಿ 9ರಿಂದ ಶ್ರೀ ಕೊಡಮಣಿತ್ತಾಯ ದೈವಕ್ಕೆ ಧರ್ಮನೇಮೋತ್ಸವ ನಡೆಯಲಿದೆ.

By suddi9

Leave a Reply

Your email address will not be published. Required fields are marked *