ಬಂಟ್ವಾಳ: ಯುವ ಶಕ್ತಿ ಫ್ರೆಂಡ್ಸ್ ವೀರಕಂಬ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇದರ ಸಹಕಾರದೊಂದಿಗೆ ತೃತೀಯ ವರ್ಷದ ಹಿಂದೂ ಬಾಂಧವರ ಮುಕ್ತ ಕಬಡ್ಡಿ ಪಂದ್ಯಾಟವು ವೀರಕಂಭ ಗ್ರಾಮ ಪಂಚಾಯತಿ ಬಳಿ ನಡೆಯಿತು. ವೀರಕಂಬ ಗ್ರಾಮ ಪಂಚಾಯತ್ ಸದಸ್ಯ ರಾಮಚಂದ್ರ ಪ್ರಭು ನಂದನತಿಮಾರು ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾವೆ ವಹಿಸಿ ಯುವಶಕ್ತಿ ಫ್ರೆಂಡ್ಸ್ ಸಂಘಟನೆಯ ಸದಸ್ಯರು ಕ್ರೀಡಾಕೂಟದ ಜೊತೆಗೆ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಿ ವೀರಕಂಭ ಗ್ರಾಮದ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವುದು ಅಭಿನಂದನೀಯವಾಗಿದೆ ಎಂದರು. ತಾಲೂಕು ಪಂಚಾಯತ್ ಸದಸ್ಯೆ ಗೀತ ಚಂದ್ರಶೇಖರ್, ಬಜರಂಗದಳ ಕಲ್ಲಡ್ಕ ವಲಯದ ಮಿಥುನ್ ಪೂಜಾರಿ ಹೊಸಮನೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೀರಕಂಬ ಒಕ್ಕೂಟದ ಅಧ್ಯಕ್ಷ ಕೊರಗಪ್ಪ ನಾಯ್ಕ ಸಿಂಗೇರಿ, ಕಲ್ಲಡ್ಕ ಬಿಲ್ಲವ ಸಂಘದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಕೇಪುಳ ಕೊಡಿ, ವೀರಕಂಭ ಗ್ರಾಮ ಪಂಚಾಯತ್ ಸದಸ್ಯರುಗಳಾದ ಜಯಂತಿ ಜನಾರ್ಧನ್ ಅಂಕಧಡ್ಕ, ಪದ್ಮಾವತಿ ಗಣೇಶ್ ಕೋಡಿ, ಜಯಂತಿ ನಂದನತಿಮಾರು, ನಿಶಾಂತ್ ರೈ, ಜನಾರ್ಧನ ಪೂಜಾರಿ ಗೊಳಿಮಾರ್, ಕ್ರೀಡಾಂಗಣದ ಸ್ಥಳದ ಮಾಲಕ ಕೃಷ್ಣಪ್ಪ ಪೂಜಾರಿ ಗಾಣದಮೂಲೆ, ಪ್ರಗತಿಪರ ಕೃಷಿಕ ಜಗನ್ನಾಥ್ ಆಲ್ವಾ ಮೈರ , ಮನೀಶ್ ಅಲ್ವಾ ವೀರಕಂಬ, ಯುವಶಕ್ತಿ ಫ್ರೆಂಡ್ಸ್ ಅಧ್ಯಕ್ಷ ಜಗದೀಶ್ ವೀರಕಂಭ ಉಪಸ್ಥಿತರಿದ್ದರು. ಬಹುಮಾನ ವಿಜೇತರು:
ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ವ್ಯೆದ್ಯನಾಥ ವಾರಿಯರ್ಸ್ ಗುರುಪುರ, ದ್ವಿತೀಯ ಬಹುಮಾನವನ್ನು ಟಾಸ್ಕ್ ಬಸವನಗುಡಿ,ತೃತೀಯ ಬಹುಮಾನವನ್ನು ಆದರ್ಶ ಫ್ರೆಂಡ್ಸ್ ಹೋಸ್ ಮಠ ಹಾಗೂ ಚತುರ್ಥ ಬಹುಮಾನವನ್ನು ಷಣ್ಮುಖ ಕೋಲ್ಪೆ ತಂಡಗಳು ಕ್ರಮವಾಗಿ ಪಡೆದುಕೊಂಡವು
