ಬಂಟ್ವಾಳ :ಕಲ್ಬುರ್ಗಿ ಜಿಲ್ಲೆಯ ಕಲ್ಬುರ್ಗಿ ದಕ್ಷಿಣ ವಲಯದ ಶಿಕ್ಷಣ ಸಂಯೋಜಕರ ನೇತೃತ್ವದ ನಿಯೋಗವೊಂದು ಬಂಟ್ವಾಳ ತಾಲೂಕಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬ ಶಾಲೆಗೆ ಭೇಟಿ ನೀಡಿತು .
ಕ್ಷೇತ್ರ ಸಂಪನ್ಮೂಲ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳು ,ಶಾಲಾ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರ ತಂಡ ಅಜೀಂ ಪ್ರೇಮ್ ಜೀ ಪೌಂಡೇಶನ್ ಸಹಯೋಗದಲ್ಲಿ ಶೈಕ್ಷಣಿಕ ಕ್ಷೇತ್ರ ಭೇಟಿ ಕಾರ್ಯಕ್ರಮದಡಿ ಈ ನಿಯೋಗ ಭೇಟಿ ನೀಡಿ ಶಾಲಾ ಚಟುವಟಿಕೆಯನ್ನುು ವೀಕ್ಷಿಸಿತು.ಮುಖ್ಯಶಿಕ್ಷಕ ನಾರಾಯಣ ಪೂಜಾರಿ ಶಾಲಾ ಶೈಕ್ಷಣಿಕ ಹಾಗೂ ಭೌತಿಕ ಮಾಹಿತಿ, ಶಿಕ್ಷಕಿ ಸಂಗೀತ ಶರ್ಮ ಮಕ್ಕಳ ಕೃಷಿ ಚಟುವಟಿಕೆ ಹಾಗೂ ಪರಿಸರ ಜಾಗೃತಿಯ ಬಗ್ಗೆ ನಿಯೋಗಕ್ಕೆ ಮಾಹಿತಿಯನ್ನು ನೀಡಿದರು.
