ಬಂಟ್ವಾಳ: ದ್ವಿಚಕ್ರ ವಾಹನ ಕಳವು ಪ್ರಕರಣ ಕ್ಕೆ ಸಂಬಂಧಿಸಿದಂತೆ ಒರ್ವನ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಪುದುಕೋಟೆ ಜಿಲ್ಲೆಯ ಅರಂತಾಂಗಿ ತಾಲೂಕಿನ ಒಡಕವಾಡಿ ನಿವಾಸಿ ರಾಜಾ ಕೆ.(38) ಬಂಧಿತ ಆರೋಪಿಯಾಗಿದ್ದಾನೆ.ಫೆ.13 ರಂದು ಕಲ್ಲಡ್ಕ ನಿವಾಸಿ ಸಂದೇಶ ಎಂಬವರು ಮೆಲ್ಕಾರ್ ನಲ್ಲಿ ನಿಲ್ಲಿಸಿದ್ದ ಆಕ್ಟೀವ್ ಹೊಂಡಾ ದ್ವಿಚಕ್ರ ವಾಹನವನ್ನು ಕಳವಾಗಿತ್ತು. ಈ ಬಗ್ಗೆ ಬಂಟ್ವಾಳ ನಗರ ಠಾಣೆ ಯಲ್ಲಿ ದೂರು ದಾಖಲಾಗಿತ್ತು.

IMG-20200218-WA0061 ‌ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಬಂಟ್ವಾಳ ನಗರ ಪೊಲೀಸರು ವಾಹನ ತಪಾಸಣೆಯಲ್ಲಿ ನಿರತರಾಗಿದ್ದಾಗ ಅನುಮಾನಾಸ್ಪದವಾಗಿ ದ್ವಿಚಕ್ರವಾಹನವನ್ನು ಚಲಾಯಿಸಿಕೊಂಡು ಬರುತ್ತಿರವುದನ್ನು ಕಂಡ ಪೊಲೀಸರು ನಿಲ್ಲಿಸಲು ಸೂಚನೆ ನೀಡಿದಾಗ ಆತ ಸೂಚನೆಯನ್ನು ದಿಕ್ಕರಿಸಿ ಪರಾರಿಗೆ ಯತ್ನಿಸಿದ್ದ ,ಇದರಿಂದ ಅನುಮಾನಗೊಂಡ ಪೊಲೀಸರು ಅತನನ್ನು ಬೆನ್ನಟಿ ಹಿಡಿದು ತಪಾಸಣೆಗೊಳಪಡಿಸಿದಾಗ ಯಾವುದೇ ದಾಖಲೆಪತ್ರಗಳಿಲ್ಲದಿದ್ದು ಕಂಡು ಬಂತು.ತಕ್ಷಣ ಪೊಲೀಸರು ಅತನನ್ನು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಿದಾಗ ದ್ವಿಚಕ್ರವಾಹನವನ್ನು ಕಳವು ಮಾಡಿ ತಂದಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ತಕ್ಷಣ ಆರೋಪಿ ರಾಜಾ ನನ್ನು ಬಂಧಿಸಿ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಡಿ.ವೈ.ಎಸ್.ಪಿ. ವೆಲಂಟೈನ್ ಡಿಸೋಜ ಅವರ ಮಾರ್ಗದರ್ಶನ ದಲ್ಲಿ, ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ಅವರ ನೇತೃತ್ವದಲ್ಲಿ ನಗರ ಠಾಣೆಯ ಎಸ್ ಐ ಅವಿನಾಶ್ ಮತ್ತು ಅವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

By Suddi9

Leave a Reply

Your email address will not be published. Required fields are marked *