ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ ಇರುವೈಲು-ಪುಚ್ಚಮೊಗರು ಇದರ ವತಿಯಿಂದ ನಿರ್ಮಿಸಲಾಗಿರುವ ಶ್ರೀ ನಾರಾಯಣ ಗುರುಸ್ವಾಮಿ ಮಂದಿರ ಹಾಗೂ ನೂತನ ಸಭಾಭವನವನ್ನು ಭಾನುವಾರ ಉದ್ಘಾಟಿಸಲಾಯಿತು. ಬಲ್ಯೊಟ್ಟು ವಿಖ್ಯಾತಾನಂದ ಸ್ವಾಮೀಜಿ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಸಂಘದ ಅಧ್ಯಕ್ಷ ಕುಮಾರ್ ಪೂಜಾರಿ ಇರುವೈಲು ಅಧ್ಯಕ್ಷತೆವಹಿಸಿದರು.
ಸಂಘದ ಜಾಗ ದಾಖಲೆಗೆ ಹಾಗೂ ರೂ.20 ಲಕ್ಷ ಅನುದಾನ, ಒಳಚರಂಡಿ ನಿರ್ಮಾಣಕ್ಕೆ ನೆರವು ನೀಡಿದ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ದಾನಿಗಳಾದ ಗುರುಮಂದಿರದ ಗೌರವಾಧ್ಯಕ್ಷ ಉಮೇಶ್ ಟಿ.ಕರ್ಕೇರಾ ತ್ಯಾಂಪೆಟ್ಟು ಹಾಗೂ ನಾಗಮ್ಮ ಪೂಜಾರ್ತಿ ಅವರನ್ನು ಸನ್ಮಾನಿಸಲಾಯಿತು. ಧಾರ್ಮಿಕ ಕಲಾಪಗಳ ಪೌರೋಹಿತ್ಯ ವಹಿಸಿದ ಶಿವಾನಂದ ಶಾಂತಿ ಮೂಡುಬಿದಿರೆ, ಇರುವೈಲು-ಪುಚ್ಚಮೊಗರು ಸಂಘದ ಕಾರ್ಯದರ್ಶಿ ದಿನೇಶ್ ಪೂಜಾರಿ ಕಟ್ಟಣಿಗೆ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಮುಂಬಯಿ ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಉದ್ಯಮಿ ವೆಂಕಟೇಶ ಶೀನ ಪೂಜಾರಿ, ಇರುವೈಲು ಗುರುಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ಸತೀಶ್ಚಂದ್ರ ಸಾಲ್ಯಾನ್ ಪಾಣಿಲ, ಇರುವೈಲ್ ಸಂಘದ ಗೌರವಾಧ್ಯಕ್ಷ ಇರುವೈಲು ತಾರಾನಾಥ್ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ದೀಪಾ ದಿನೇಶ್ ಬಟಾರ, ಹೊಸಬೆಟ್ಟು ಚರ್ಚ್ ಧರ್ಮಗುರು ಸಂತೋಷ್ ರೊಡ್ರಿಗಸ್, ಜಿಪಂ ಸದಸ್ಯ ಸುಚರಿತ ಶೆಟ್ಟಿ, ಉದ್ಯಮಿ ದಿವಾಕರ ಶೆಟ್ಟಿ ತೋಡಾರು, ಮೂಡುಬಿದಿರೆ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಪಿ.ಕೆ.ರಾಜು ಪೂಜಾರಿ, ನಿವೃತ್ತ ಡಿವೈಎಸ್ಪಿ ಪೀತಾಂಬರ ಹೇರಾಜೆ, ಗೆಜ್ಜೆಗಿರಿ ಕ್ಷೇತ್ರದ ಕೋಶಾಧಿಕಾರಿ ದೀಪಕ್ ಕೋಟ್ಯಾನ್, ವಕೀಲ ಶರತ್ ಶೆಟ್ಟಿ, ಗಣೇಶ್ ಪೂಜಾರಿ, ಶಾಂತಿಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು.
ಬೆಳಗ್ಗೆ ಗಣಪತಿ ಹೋಮ, ಕಲಶ ಅಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಉಮೇಶ್ ಟಿ.ಕರ್ಕೇರ ಅವರಿಂದ ಅನ್ನದಾನ, ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಹಾಸ್ಯ ನಾಟ್ಯ ವೈಭವ, ಶಾರದಾ ಆಟ್ರ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಇವರಿಂದ `ಬಂಜಿಗ್ ಹಾಕೊಡ್ಚಿ’ ತುಳು ನಾಟಕ ಪ್ರದರ್ಶನ ನಡೆದವು.
