ಬಂಟ್ವಾಳ:   ಸಾಗರದ  ಶಿರಾಲಕೊಪ್ಪ ವಲಯ ಅರಣ್ಯಾಧಿಕಾರಿ ಯಾಗಿ  ವರ್ಗಾವಣೆ ಗೊಂಡಿರುವ  ಬಂಟ್ವಾಳ ವಲಯ ಅರಣ್ಯಾಧಿಕಾರಿ ಬಿ.ಸುರೇಶ್ ಅವರ ಬೀಳ್ಕೋಡುಗೆ ಕಾರ್ಯಕ್ರಮ ಬಿ.ಸಿ.ರೋಡಿನಲ್ಲಿರುವ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ  ನಡೆಯಿತು.ಬಂಟ್ವಾಳ ಅರಣ್ಯಾಧಿಕಾರಿಯಾಗಿ ಮೂರುವರೆ ವರ್ಷಗಳ ಸೇವೆ ಸಲ್ಲಿಸಿರುವ ಇವರನ್ನು ಬಂಟ್ವಾಳ ವಲಯ ಅರಣ್ಯ ಇಲಾಖೆಯ ವತಿಯಿಂದ ಬಿ.ಸುರೇಶ್ ದಂಪತಿಯನ್ನು ಸನ್ಮಾನಿಸಿ  ಬೀಳ್ಕೋಡಲಾಯಿತು.
IMG-20200216-WA0006ಮಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ  ಶಂಕರೇ ಗೌಡ ಅವರು ಕಾರ್ಯಕ್ರಮದ ಅಧ್ಯಕ್ಷೆ ತೆ ವಹಿಸಿದ್ದರು. ‌ಸಿಬ್ಬಂದಿ ಗಳಾದ ಉಪವಲಯ ಅರಣ್ಯ ಧಿಕಾರಿ  ಅನಿಲ್ ಅರಣ್ಯ ರಕ್ಷಕರಾದ ಜಿತೇಶ್, ದಯಾನಂದ, ಸ್ಮಿತಾ, ಮನೋಜ್, ರೇಖಾ, ಲಕ್ಮೀನಾರಾಯಣ , ಅರಣ್ಯ ವೀಕ್ಷಕ ಭಾಸ್ಕರ, ಕಚೇರಿ ಸಿಬ್ಬಂದಿಗಳು ಭಾಗವಹಿಸಿದ್ದರು.ಉಪವಲಯ ಅರಣ್ಯಾಧಿಕಾರಿ ಪ್ರೀತಂ ಎಸ್ ಸ್ವಾಗತಿಸಿ, ಅರಣ್ಯ ರಕ್ಷಕ ವಿನಯ್ ಎಸ್ ವಂದಿಸಿದರು.ಉಪವಲಯ ಅರಣ್ಯಾಧಿಕಾರಿ ಯಶೋಧರ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *