ಫರಂಗಿಪೇಟೆ :ಪುದು  ಗ್ರಾಮ ದ ನೆತ್ತರಕೆರೆ ಎಂಬಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹು ದಿನಗಳಿಂದ ಕಾಡುತಿದ್ದು ಶಾಶ್ವತ ಪರಿಹಾರ ಕ್ಕಾಗಿ  ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ. ಸುಮಾರು ೧೨ಲಕ್ಷ ರೂಪಾಯಿಗಳ ಅನುದಾನದಿಂದ ಓವರ್ ಹೆಡ್ ಟ್ಯಾಂಕ್ , ಪೈಪ್ ಲೈನ್ ಅಳವಡಿಕೆ ಗೆ ಶಿಲಾನ್ಯಾಸ ಗೈದರು . ಬಳಿಕ ಮಾತನಾಡಿದ ರವೀಂದ್ರ ಕಂಬಳಿಯವರು ಕುಡಿಯುವ ನೀರು ಪಡೆಯುವುದು ಪ್ರತಿಯೊಬ್ಬರ ಹಕ್ಕು . ಅದನ್ನು ಅನುಷ್ಠಾನ ಗೊಳಿಸುವುದು ಜನ ಪ್ರತಿನಿದಿಗಳ ಕರ್ತವ್ಯ ಮುಂದಿನ ದಿನಗಳಲ್ಲಿ ಯಾರಿಗೂ    ಕುಡಿಯುವ ನೀರಿನ ಅಭಾವ ಇಲ್ಲದಂತೆ ನೋಡಿಕೊಳ್ಳಲಾಗುವುದು ಎಂದರು.

IMG_8017dd

  ಈ ಸಂದರ್ಭದಲ್ಲಿತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ ತುಂಬೆ ,  ಸ್ಥಳೀಯ ಪಂಚಾಯತ್ ಸದಸ್ಯರುಗಳಾದ ಸಂತೋಷ್ ನೆತ್ತರಕೆರೆ , ಮನೋಜ್ ಆಚಾರ್ಯ , ಗಣ್ಯರುಗಳಾದ  ಸುಬ್ರಮಣ್ಯ ರಾವ್ , ಸುರೇಶ ಭಂಡಾರಿ ಅರ್ಭಿ , ಪ್ರವೀಣ್ ಶೆಟ್ಟಿ ಸುಜೀರ್  ದಿನೇಶ್ ಶೆಟ್ಟಿ ಕೊಟ್ಟಿಂಜ , ರಾಧಾಕೃಷ್ಣ ತಂತ್ರಿ , ಲೋಕೇಶ್ ನೆತ್ತರಕೆರೆ , ಸುಧಾಕರ್  ಎನ್  ,  ಪದ್ಮನಾಭ ಗೋವಿನತೋಟ , ಮತ್ತಿತರರು ಉಪಸ್ಥಿತರಿದ್ದರು . ದಾಮೋದರ ನೆತ್ತರಕೆರೆ ಯವರು ಸ್ವಾಗತಿಸಿ,  ವಂದಿಸಿದರು .

By Suddi9

Leave a Reply

Your email address will not be published. Required fields are marked *