ಬಂಟ್ವಾಳ: ದಿನಸಿ ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ ನಷ್ಟ ಸಂಭವಿಸಿದ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ವೀರಕಂಭ ಎಂಬಲ್ಲಿ ನಡೆದಿದೆ.ವೀರಕಂಭ ಹಮೀದ್ ಎಂಬವರ ದಿನಸಿ ಅಂಗಡಿಗೆ ರಾತ್ರಿ ಬೆಂಕಿ ತಗುಲಿ ಅಂಗಡಿ ಭಾಗಶಃ ಬೆಂಕಿಗಾಹುತಿಯಾಗಿದೆ.ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸುವಲ್ಲಿ ಯಸ್ವಿಯಾಗಿದ್ದಾರೆ.
ಅಂಗಡಿಗೆ ತಾಗಿಕೊಂಡೆ ಮನೆಯಿದ್ದುದರಿಂದ ಕೆಲ ಹೊತ್ತು ಅಂತಕದ ವಾತಾವರಣ ನಿರ್ಮಾಣವಾಯಿತು.ಸಕಾಲದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳೀಯರ ಸಹಕಾರದಲ್ಲಿ ನಡೆಸಿದ ಕಾರ್ಯಾಚರಣೆಯಿಂದ ಅಪಾಯ ತಪ್ಪಿದೆ. ವಿಟ್ಲ ಠಾಣಾ ಎಸ್. ಐ. ವಿನೋದ್ ಮತ್ತವರ ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಸೂಕ್ತ ವಾದ ವ್ಯವಸ್ಥೆಯನ್ನು ಕಲ್ಪಿಸಿದ್ದರು.
