ವಿಟ್ಲ ಬಾಲ ಗೋಕುಲ ಸಮಿತಿ ಮತ್ತು ಶ್ರೀ ಸಿದ್ಧಿಗಣಪತಿ ಸಹಿತ ವಿದ್ಯಾಸರಸ್ವತಿ ಮಹಾಯಾಗ ಸಮಿತಿ ಇದರ ಆಶ್ರಯದಲ್ಲಿ ವಿದ್ಯಾರ್ಥಿಗಳ ಕ್ಷೇಯೋಭಿವೃದ್ಧಿಗಾಗಿ ನಡೆದ ಯಾಗದ ಲೆಕ್ಕಪತ್ರ ಮಂಡನೆ ಸಭೆ ನಡೆದು ಉಳಿಕೆ ಹಣದಲ್ಲಿ ಪಾಶ್ರ್ವವಾಯು ಪೀಡಿತಳಾಗಿ ಅನಾರೋಗ್ಯದಿಂದ ಬಳಲುತ್ತಿರುವ ವಿದ್ಯಾರ್ಥಿನಿ ವರ್ಷಿಣಿ ಕಂಬಳಬೆಟ್ಟು ಇವಳ ಔಷದೋಪಾಚಾರಕ್ಕಾಗಿ ಸಮಿತಿಯ ಮಾರ್ಗದರ್ಶಕ ಜಗನ್ನಾಥ ಕಾಸರಗೋಡು ಇವರ ಸಲಹೆಯಂತೆ ಸದಸ್ಯರೆಲ್ಲರ ಒಮ್ಮತದ ಮೇರೆಗೆ 25000 ರೂಪಾಯಿ ಚೆಕ್ಕನ್ನು ಸಮಿತಿಯ ಗೌರವಾಧ್ಯಕ್ಷ ಸದಾಶಿವ ಆಚಾರ್ಯ ನೀಡಿದರು.

SHV_5481ಈ ಸಂದರ್ಭದಲ್ಲಿ ಯಾಗ ಸಮಿತಿ ಅಧ್ಯಕ್ಷ ರಾಘವೇಂದ್ರ ಪೈ, ಉಪಾಧ್ಯಕ್ಷರುಗಳಾದ ಭಾಸ್ಕರ ರೈ ಮತ್ತು ಸಂತೋಷ್ ಶೆಟ್ಟಿ, ಕಾರ್ಯದರ್ಶಿ ರಮೇಶ ಧರ್ಮನಗರ, ಸದಸ್ಯರುಗಳಾದ ಸುಭಾಶ್ಚಂದ್ರ ನಾಯಕ್ ಮತ್ತು ಅನಂತಪ್ರಸಾದ್ ಹಾಗೂ ಬಾಲಗೋಕುಲ ಸಮಿತಿ ಅಧ್ಯಕ್ಷ ಹರೀಶ್ ಸಿ ಹೆಚ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *