ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ವಿಠಲ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು ಅಧ್ಯಕ್ಷ ಸ್ಥಾನವನ್ನು ವಿಠಲ ವಿದ್ಯಾ ಸಂಘದ ಅಧ್ಯಕ್ಷರಾದ ಶ್ರೀಯುತ ತಿರುಮಲೇಶ್ವರ ಭಟ್ ಅವರು ವಹಿಸಿದ್ದರು.

SHV_5002 (1) ಕಾರ್ಯಕ್ರಮದಲ್ಲಿ ವಿಠಲ ವಿದ್ಯಾ ಸಂಘದ ಉಪಾಧ್ಯಕ್ಷರಾದ ಆಲ್ಫಾನ್ಸ್ ಸಿಲ್ವೆಸ್ಟರ್ ವೇಗಸ್ ಕಾರ್ಯದರ್ಶಿಗಳಾದ ಶ್ರೀ ರಾಧಾಕೃಷ್ಣ ನಾಯಕ್ ಸದಸ್ಯರಾದ ಶ್ರೀ ನಿತ್ಯಾನಂದ ನಾಯಕ್ ಹಾಗೂ ಶ್ರೀ ಪದ್ಮಯ್ಯ ಗೌಡ ಹಾಗೂ ಆಡಳಿತ ಅಧಿಕಾರಿಗಳಾದ ಶ್ರೀ ಪ್ರಶಾಂತ್ ಚೊಕ್ಕಾಡಿ ಅವರು ಉಪಸ್ಥಿತರಿದ್ದರು. ಅಲ್ಲದೆ ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಹಾಗೂ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು ಹಾಗೂ ವಿದ್ಯಾರ್ಥಿಗಳು ನಗದು ರೂಪದಲ್ಲಿ ಕೊಡುಗೆ ನೀಡಿದರು. ವಿದ್ಯಾರ್ಥಿ ಸಂಘದ ನಾಯಕ ಶ್ರೀ ಕಾರ್ತಿಕ್ ಅವರು ಸ್ವಾಗತಿಸಿದರು ಹಾಗೂ ಜಯಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರು ಮತ್ತು ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾದ ಕುಮಾರಿ ದಿವ್ಯಶ್ರೀ ವಂದಿಸಿದರು.

By suddi9

Leave a Reply

Your email address will not be published. Required fields are marked *