ಬಂಟ್ವಾಳ: ಬಿ‌.ಸಿ‌.ರೋಡ್ ಬೈಪಾಸ್ ನ ಆರಾಧನಾ ಫ್ರೆಂಡ್ಸ್ ಸರ್ಕಲ್ ಇದರ 32 ನೇ ವಾರ್ಷಿಕೋತ್ಸವವನ್ನು ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಅರ್ಥಧಾರಿ, ನಿವೃತ್ತ ಮುಖ್ಯ ಶಿಕ್ಷಕ ನಾಟಿ ಕೃಷ್ಣ ರಾಜ ಶೆಟ್ಟಿ ನರಿಕೊಂಬು ಇವರನ್ನು ದಿವಂಗತಶ್ರೀಮತಿ ಲಕ್ಷ್ಮೀ ಅಮ್ಮ ದಿವಂಗತ ಮರಿಯಪ್ಪಯ್ಯ ಹೊಳ್ಳ ಕಳ್ಳಿಮಾರು ಇವರ ಸ್ಮರಣಾರ್ಥ ಇವರ ಮಕ್ಕಳು ನೀಡುವ “ಆರಾಧನಾ ಪ್ರಶಸ್ತಿ 2020” ನ್ನು ಪ್ರದಾನಗೈದು ಸನ್ಮಾನಿಸಲಾಯಿತು.

209d2c34-3426-4d4a-b3cc-b8e4b729d1caಹಾಗೆಯೇ 2018-19ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಯಲ್ಲಿ ಶೇ. 94 ಅಂಕಗಳಿಸಿದ ಕುಮಾರಿ ಪ್ರತೀಕ್ಷಾ ಪೂಂಜೆರೆಕೋಡಿ ಇವರನ್ನು ಪ್ರತಿಭಾಪುರಸ್ಕಾರ ನೀಡಿ ಅಭಿನಂದಿಸಲಾಯಿತು. ನಿವೃತ್ತ ಪ್ರೊಫೆಸರ್ ಡಾ. ಶಿವರಾಮ ಹೊಳ್ಳ , ನಿವೃತ್ತ ಸೇನಾ ಯೋಧ ಗಣಪತಿ ಸೋಮಯಾಜಿ ಹಾಗೂ ಆರಾಧನಾ ಫ್ರೆಂಡ್ಸ್ ಸರ್ಕಲ್ ನ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಪರಮೇಶ್ವರ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಯಕ್ಷಗಾನ ಬಯಲಾಟ ಅದ್ಭುತವಾಗಿ ಪ್ರದರ್ಶನ ಗೊಂಡಿತು.

By Suddi9

Leave a Reply

Your email address will not be published. Required fields are marked *