ಹಿಂದೂ ಸೇವಾ ಸಮಿತಿ ಬಾರ್ದಿಲ ಕಲ್ಲಾಡಿ ಇದರ 11 ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಆದಿತ್ಯವಾರ ನಡೆಯಿತು, ಬೆಳಿಗ್ಗೆ ಗಣಹೋಮ, ನಂತರ ಇರುವೈಲು ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ಜರಗಿತು, ಮಧ್ಯಾಹ್ನ ಮಹಾಪೂಜೆ ಯ ನಂತರ ಪ್ರಸಾದ ವಿತರಣೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

