ಕೈಕಂಬ: ಸಾವಿರಾರು ವರ್ಷಗಳ ಹಿಂದೆ ಆನಂತೇಶ್ವರ ಹಾಗೂ ನಾಗ ಸನ್ನಿಧಿ ಇದ್ದ ಕ್ಷೇತ್ರ ಕಟೀಲು ಸಮೀಪದ ಮಲ್ಲಿಗೆ ಅಂಗಡಿ ಬಳಿ ಇದೆ ಎಂದು ಪ್ರಶ್ನಾಚಿಂತನೆಯಲ್ಲಿ ಕಂಡುಬಂದಿದೆ.  960 ವರ್ಷದ ಹಿಂದಿನ ಆನಂತೇಶ್ವರ ದೇವರು, ನಾಗ ಸನ್ನಿಧಿ, ಹಾಗೂ ಪೂಜ್ಯರ ಗುರುಪೀಠ ಇದೆ ಎಂದು ಪ್ರಶ್ನೆ ಚಿಂತನೆಯಲ್ಲಿ ತಿಳಿದು ಬಂದಿದೆ.ಸಾಲ್ಯಾನ್ ಕುಟುಂಬವು 30 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಮನೆ ಕಟ್ಟಿದಾಗ ಸಮಸ್ಯೆ ಗಳು ಒಂದೊಂದು ಆಗಿ ಬರ ತೊಡಗಿದವು.

11-06

01ಮನೆಯ ಜಾಗದಲ್ಲಿದ್ದ ಬನದಂತಿದ್ದ ಸ್ಥಳವೇ ಇದಕ್ಕೆ ಕಾರಣ ಇರಬಹುದೆಂದು ಜ್ಯೋತಿಷ್ಯರ ಮುಖಾಂತರ  ಪ್ರಶ್ನೆ ಚಿಂತನೆಯ ಲ್ಲಿ ತಿಳಿದು ಬಂತು. ಚೆನ್ನೈ ಯ ಗುರುವೊಬ್ಬರು ಮನೆಗೆ ಬಂದು ಈ ಸ್ಥಳದಲ್ಲಿ ನಾಗ ಸಾನಿಧ್ಯ ಇದೆ. ಪ್ರತಿ ಹುಣ್ಣಿಮೆಯ ದಿನ ಸೀಯಾಳ ಹಾಗೂ ಹಿಂಗಾರ ನೀಡುತ್ತಾ ಬಂದರೆ ಎಲ್ಲ ಕಷ್ಟಗಳು ದೂರವಾಗುತ್ತದೆ ಎಂದು ತಿಳಿಸಿದರು.

02

ಪೂಜ್ಯರ ಗುರುಪೀಠದ ಮುಂದೆ ಪ್ರಾರ್ಥಿಸುವ ಸುರೇಶ್‌ ಸಾಲಿಯಾನ್. 

11-01ಹಿಂಗಾರ , ಸೀಯಾಳಗೊಳಿವ ದೇವರು 

ಸಾಲಿಯಾನ್‌  ಕುಟುಂಬದವರು  ದಿನನಿತ್ಯ ಪೂಜಿಸುತ್ತಾ  ಪ್ರತಿ ಹುಣ್ಣಿಮೆಯ ದಿನ ಹಿಂಗಾರ ಹಾಗೂ ಸೀಯಾಳ ನೀಡಿ ಪೂಜಿಸುತ್ತಾ ಬಂದಿದ್ದಾರೆ. ಈ ರೀತಿ ದೇವರ ಸಂತೃಪ್ತ ಗೊಳಿಸಿದ ಸಾಲ್ಯಾನ್ ಕುಟುಂಬವು ಮನಸ್ತಾಪದಿಂದ ದೂರವಾಗಿದ್ದ ಎಲ್ಲ ಕುಟುಂಬವು ಒಂದಾಗುವಂತೆ ದೇವರು ಅನುಗ್ರಹಿಸಿದ್ದಾರೆ ಎನ್ನುತ್ತಾರೆ ಇಲ್ಲಿಯ   ಸಾಲ್ಯಾನ್ ಕುಟುಂಬದ ಮೂಲಗಳು.

03ಬೇಡಿದಿಷ್ಟವ ನೀಡುವ ಕ್ಷೇತ್ರ ದೂರದ ಮುಂಬೈ ನಿಂದ ಹಿಡಿದು ಸ್ಥಳೀಯ ಸಮಸ್ಯೆ ನೀಗುವಲ್ಲಿ ಈ ಸ್ಥಳದ ಕಾರಣಿಕ ಕೆಲಸ ಮಾಡುತ್ತಿದೆಯಂತೆ.ಬಂಜೆಯಾಗಿ ಬಂದು ಮಗು ನೀಡು ಎಂದು ಬೇಡುವ ಮಾತೆಯರಿಗೆ, ಮನೆಯಲ್ಲಿ ಬಂಗಾರ ಕಾಣೆಯಾದಾಗ ಬಂದು ಹರಿಕೆ ಮಾಡಿದ ಕುಟುಂಬಕ್ಕೂ ಸ್ಥಳದ ದೇವರು ಭಕ್ತಿ ಪೂರ್ವಕವಾಗಿ ಅವರ ಅಭೀಷ್ಟೆಯನ್ನು ದಯ ಪಾಲಿಸಿದ ಉದಾಹರಣೆ ಇದೆ ಎನ್ನುತ್ತಾರೆ ಕುಟುಂಬಸ್ಥರು.

04

 

ಇಲ್ಲಿ ಪ್ರತೀ ಹುಣ್ಣಿಮೆಯಂದು ಆಶ್ಲೀಷ ಪೂಜೆ , ಭಜನಾ ಸಂಕೀರ್ತನೆ , ಅನ್ನಸಂತರ್ಪನೆ ನಡೆಯುತ್ತದೆ.

ಮಾ. 12 : ಶಿಲಾನ್ಯಾಸ

ಈ ಸ್ಥಳದಲ್ಲಿ  ಶ್ರೀ ಸುರೇಶ್‌ ಸಾಲಿಯಾನ್‌ ಅವರ ಕುಟುಂಬ ಪೂಜಿಸುತ್ತಿರುವ ಸ್ಥಳದಲ್ಲಿ ದೈವಜ್ಞರ ಸಲಹೆ ಯಂತೆ ಶಿಲಾನ್ಯಾಸ ನಡೆಯಲಿದೆ. ಕಿನ್ನಿಕಂಬ್ಲ ನರಸಿಂಹ ಕಾಮತ್ ಪ್ರಶ್ನೆ ಚಿಂತನೆ ಯಲ್ಲಿ  ಕಂಡುಬಂದಂತೆ  ದೈವಜ್ಞತಂಜ್ಞರಾದ ಬಂಟ್ವಾಳ ದೇವರಾಜ ಆಚಾರ್ಯ  ಶಿಲ್ಪಿಯು  ತಿಳಿಸಿದಂತೆ ಮುಂದೆ ಭಕ್ತರ ಬೇಡಿದಿಷ್ಟವ ಕರುಣಿಸುವ  ಶ್ರೀ ಪ್ರಕೃತಿ ಅನಂತೇಶ್ವರ ಕ್ಷೇತ್ರವಾಗಲಿದೆ.

05

06‌

ದಿನದಿಂದ ದಿನ ಬೆಳೆಯುತ್ತಿರು ಕಲ್ಲಿನ ವಿಗ್ರಹ

 

11-03

By Suddi9

Leave a Reply

Your email address will not be published. Required fields are marked *