ಕೈಕಂಬ:ಕುಪ್ಪೆಪದವು ದುರ್ಗೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ಫೆಬ್ರವರಿ 13 ರ ಗುರುವಾರ ಮೊದಲ್ಗೊಂಡು 16 ರ ಆದಿತ್ಯವಾರದವರೆಗೆ ನಡೆಯಲಿದೆ, 13 ರ ಗುರುವಾರ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ನವಕ ಕಲಶಾಭಿಷೇಕ, ಮಧ್ಯಾಹ್ನ ಗಣಪತಿ ಯಾಗ, ಮಹಾಪೂಜೆ ಅನ್ನಸಂತರ್ಪಣೆ, ರಾತ್ರಿ ರಂಗ ಪೂಜೆ, ಉತ್ಸವ ಬಲಿ, ಕಟ್ಟೆ ಪೂಜೆ, ನಂತರ ಕೊಡಮಣಿತ್ತಾಯ ದೈವಕ್ಕೆ ಪರ್ವ, ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸಮಾಗಮ ಕುಪ್ಪೆಪದವು ಇದರ ವತಿಂದ ಪತ್ತಾಬತಾರೋಳು ಎಂಬ ನ್ರತ್ಯ ವೈವಿಧ್ಯ ನಡೆಯಲಿದೆ14 ರ ಶುಕ್ರವಾರ ಗಣಪತಿ ದೇವರಿಗೆ ರಂಗ ಪೂಜೆ, ರಾತ್ರಿ ಉತ್ಸವಬಲಿ ಕಟ್ಟೆಪೂಜೆ, ನಡೆಯಲಿದೆ, ರಾತ್ರಿ 8 ರಿಂದ ಉತ್ಸಾಹಿ ತರುಣರು ಕುಳವೂರು ಇವರ ವತಿಯಿಂದ ಪುಟಾಣಿಗಳಿಂದ ನ್ರತ್ಯ ವೈಭವ ಹಾಗು ಆಲ್ ಎನ್ನಾಳ್ ಎಂಬ ತುಳು ನಾಟಕ ಪ್ರದರ್ಶನ ನಡೆಯಲಿದೆ.15ರ ಶನಿವಾರ ಬೆಳಿಗ್ಗೆ 8 ಕ್ಕೆ ಚಂಡಿಕಾ ಯಾಗ, ಮಧ್ಯಾಹ್ನ ಮಹಾಪೂಜೆ, ಉತ್ಸವ ಬಲಿ, ಅನ್ನಸಂತರ್ಪಣೆ, ರಾತ್ರಿ ಗಣಪತಿ ದೇವರಿಗೆ ರಂಗಪೂಜೆ, ಶ್ರೀದೇವಿಗೆ ರಂಗಪೂಜೆ, ಉತ್ಸವಬಲಿ, ಕಟ್ಟೆಪೂಜೆ, ಮುತ್ತೂರು, ಮಾನಿಪಲ್ಲ ಸವಾರಿ ಹಾಗು ಶ್ರೀದೇವಿ ಮತ್ತು ಕೊಡಮಣಿತ್ತಾಯ ದೈವದ ಭೇಟಿ, ರಾತ್ರಿ 12 ಕ್ಕೆ ಕೊಡಮಣಿತ್ತಾಯ ದೈವದ ನೇಮೋತ್ಸವ ಜರಗಲಿದೆ, ಶನಿವಾರ ಸಂಜೆ ಗಂಟೆ 5 ರಿಂದ ರಾತ್ರಿ 9.30 ರವರೆಗೆ ದುರ್ಗೇಶ್ವರೀ ಯಕ್ಷಗಾನ ಮಂಡಳಿ(ರಿ)ಇವರಿಂದ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ನಡೆಯಲಿದೆ.16 ರ ಆದಿತ್ಯವಾರ ಬೆಳಿಗ್ಗೆ 10 ಕ್ಕೆ ನವಕ ಪ್ರದಾನ, ಸಂಪ್ರೋಕ್ಷಣೆ, ನಂತರ ಪ್ರಸಾದ ವಿತರಣೆ ನಡೆಯಲಿದೆ,
