ಬಂಟ್ವಾಳ: ಭಗವಂತನ ದರ್ಶನ ಮಾಡಿ ಕಣ್ತುಂಬಿಕೊಂಡಾಗ ಶಾಸ್ವತ ಆನಂದ ಪ್ರಾಪ್ತಿಯಾಗುತ್ತದೆ ಎಂದು ಎಡನೀರು ಮಠಾದೀಶರಾದ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳು ಹೇಳಿದರು.ಪಾಣೆಮಂಗಳೂರಿನ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ಜ್ಞಾನ ಮಂದಿರ , ಸಭಾಂಗಣ , ಯಜ್ಞ ಮಂಟಪದ ಲೋಕಾರ್ಪಣೆ, ಪ್ರತಿಮೆ ಅನಾವರಣ, ಗಜಪ್ರತಿಷ್ಠೆಯ ಉದ್ಘಾಟನೆಯ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆರ್ಶೀವಚನ ನೀಡುತ್ತಿದ್ದರು.ದೇವರಿಗೆ ಮಾಡುವ ಅಲಂಕಾರ ನಮ್ಮ ಹೃದಯ ಮುಟ್ಟುತ್ತದೆ, ಮನಸ್ಸು ಶಾಂತವಾಗುತ್ತದೆ ಶಾಶ್ವತವಾದ ನೆಮ್ಮದಿ ಸಿಗಬೇಕಾದರೆ ಭಗವಂತನ ಆರಾಧನೆ ಮುಖ್ಯವಾಗಿದೆ ಎಂದ ಅವರು ಶ್ರೀ ಕ್ಷೇತ್ರ ನಂದಾವರ ಅಭಿವೃದ್ಧಿಯ ಪಥದಲ್ಲಿ ಬೆಳೆಯುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

ಶ್ರೀ ವಿಜಯಲಕ್ಷ್ಮಿ , ಸುಜೀರುಗುತ್ತು ಸಂಜೀವ ಚೌಟ ಸಭಾಂಗಣ ಉದ್ಘಾಟಿಸಿದ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನಗೈದು ಜ್ಞಾನ, ಬುದ್ದಿ ವೃದ್ದಿಯಾದಾಗ ಸಂಪತ್ತು ಕೂಡ ವೃದ್ದಿಯಾಗುತ್ತದೆ.ಧರ್ಮವೇ ಜೀವನ,ಎಚ್ಚರದ ಬದುಕು ನಮ್ಮದಾಗಬೇಕು,ವಿಶ್ವದ ನಂದಾದೀಪವೇ ಭಾರತವಾಗಿದ್ದು, ನಂದಾದೀಪವೇ ಆಧ್ಯಾತ್ಮವಾಗಿದೆ ಎಂದರು.
ಯಜ್ಞ ಮಂಟಪ ಉದ್ಘಾಟಿಸಿದ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಅವರು ಆಶೀರ್ವನಗೈದು ಒಂದೇ ಮನಸ್ಸು ಪ್ರೀತಿ, ವಿಶ್ವಾಸಗಳ ಶಾಂತಿಯುತ ಬದುಕು ನಮ್ಮದಾಗಬೇಕು,ದೇಶ ಇಂದು ಆತಂಕಗಳ ವಾತಾವರಣದಲ್ಲಿರುವ ಈ ಕಾಲಘಟ್ಟದಲ್ಲಿ ಪರಸ್ಪರ ಸಾಮರಸ್ಯದಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಉತ್ತಮವಾದ ಬದುಕು ಸಾಧ್ಯ ಎಂದರು.ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್,ಅವರು ಅರ್ಚಕರ ವಿಶ್ರಾಂತಿ ಗೃಹ, ನೈವೇದ್ಯ ಕೊಠಡಿ ಮತ್ತು ವ್ಯವಸ್ಥಾಪನಾ ಕಚೇರಿ ಉದ್ಘಾಟಿಸಿದರು.ಮಾಜಿ ಸಚಿವ ರಮಾನಾಥ ರೈ ಅವರು ಈಶ್ವರ ಪ್ರತಿಮೆ ಅನಾವರಣಗೊಳಿಸಿದರು.
ಜಿ.ಪಂ.ಸದಸ್ಯ ರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ರವೀಂದ್ರ ಕಂಬಳಿ ಅವರು ಗಜಪ್ರತಿಷ್ಠೆಗೆ ಮಾಲಾರ್ಪಣೆಗೈದರು. ವೇದಿಕೆಯಲ್ಲಿ ತಾ.ಪಂ.ಸದಸ್ಯರಾದ ನಸೀಮಾ ಬೇಗಂ, ಸಂಜೀವ ಪೂಜಾರಿ, ಗ್ರಾ.ಪಂ.ಅಧ್ಯಕ್ಷ ವಿಶ್ವನಾಥ ಬೆಳ್ಚಾಡ, ಸಜೀಪ ಮುನ್ನೂರು ಗ್ರಾ.ಪಂ.ಅಧ್ಯಕ್ಷ ಶರೀಫ್, ಸಜೀಪ ನಡು ಗ್ರಾ.ಪಂ.ಅಧ್ಯಕ್ಷೆ ಉಮಾವತಿ, ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ, ಪ್ರಧಾನ ಅರ್ಚಕ ವೇದಮೂರ್ತಿ ಮಹೇಶ್ ಭಟ್ , ಸಮಿತಿ ಸದಸ್ಯರಾದ ಕೆ.ಪ್ರಭಾಕರ ಶೆಟ್ಟಿ, ಎಸ್.ಗಂಗಾದರ ಭಟ್ ಕೊಳಕೆ, ಡಾ!ಎಸ್.ಎಂ.ಗೋಪಾಲಕೃಷ್ಣ ಆಚಾರ್ಯ, ಮೋಹನದಾಸ ಪೂಜಾರಿ ಬೊಳ್ಳಾಯಿ, ಅಣ್ಣು ನಾಯ್ಕ್ ನಗ್ರಿ, ರಮಾ ಎಸ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.ಸಭಾಂಗಣ ಕೊಡುಗೆಯಾಗಿ ನೀಡಿದ ರಾಜೇಶ್ ಚೌಟ ಅವರನ್ನು ಗೌರವಿಸಲಾಯಿತು.ಸಹಕಾರ ನೀಡಿದ ಪುಷ್ಪಾ ಎಸ್ ಹೆಗ್ಡೆ , ಪುಷ್ಪಾವತಿ ಜೆ.ಆಚಾರ್ಯ, ಮೋಹನದಾಸ ಹೊಳ್ಳ, ಅಣ್ಣು ನಾಯ್ಕ ,
ಅವರನ್ನು ಸನ್ಮಾನಿಸಲಾಯಿತು.ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಡಾ ! ಎಸ್.ಎಂ.ಗೋಪಾಲಕೃಷ್ಣ ಆಚಾರ್ಯ ವಂದಿಸಿದರು.ನಿವೃತ್ತ ಶಿಕ್ಷಕ ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
