ಬಂಟ್ವಾಳ:ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿಯಮಿತದ ( ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್) ನೂತನ ಆಡಳಿತ ಮಂಡಳಿ ಚುನಾವಣೆ ಸಂದರ್ಭ ನಿಯಮಗಳನ್ನು ಸಂಪೂರ್ಣ ವಾಗಿ ಗಾಳಿಗೆ ತೂರಲಾಗಿದ್ದು, ಮೃತಪಟ್ಟವರ ಹೆಸರಲ್ಲೂ ಮತದಾನ ನಡೆದಿದೆ. ಇದರಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಪಾದಿಸಿದ್ದಾರೆ. ಬುಧವಾರ ಬಿ.ಸಿ.ರೋಡಿನ ಕಾಂಗ್ರೆಸ್ ಪಕ್ಷ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸದ್ಯ ಅಧ್ಯಕ್ಷ-  ಉಪಾಧ್ಯಕ್ಷ ಚುನಾವಣಾ ಪ್ರಕ್ರಿಯೆಗೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅರ್ಹತೆ ಇದ್ದವರಿಗೆ ಮತದಾನ ನೀಡುವ ಬದಲು ಅನರ್ಹರಿಗೆ ಅವಕಾಶ ಕೊಟ್ಟಿರುವುದು ತನ್ನ ರಾಜಕೀಯ ಜೀವನದಲ್ಲಿ ನೋಡಿದ್ದು ಮೊದಲು ಎಂದರು. ಮರಣಹೊಂದಿದವರು,ದಾರಿಹೋಕರು , ಸದಸ್ಯರಲ್ಲದವರು ಇಲ್ಲಿ  ಬೋಗಸ್ ಮತದಾನ ಮಾಡಿದ್ದಾರೆ ಎಂದ ಆರೋಪಿಸಿದ ಅವರು ಅಧಿಕಾರ ದುರುಪಯೋಗ ಮಾಡಿಕೊಂಡು ಚುನಾವಣೆ ನಡೆಸುವ ಇಂತಹ ಕೆಟ್ಟ ಸಂಪ್ರದಾಯಕ್ಕೆ ಕಡಿವಾಣ ಹಾಕಬೇಕೆಂಬ ಉದ್ದೇಶದಿಂದ ಕೋಟ್೯ನ ಕದ ತಟ್ಟಿದ್ದೆವೆ  ಎಂದು ಹೇಳಿದರು.

IMG-20200205-WA0058 (1)
ತಾನ ಶಾಸಕ, ಮಂತ್ರಿಯಾಗಿ ಕೆಲಸ ಮಾಡಿದ ಸಂದರ್ಭದಲ್ಲಿ  ಒಂದೇ ಒಂದು ಸಾರಿ ಕೂಡ ಸಹಕಾರಿ ಸಂಘಗಳ ಚುನಾವಣೆಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದು ಅವರು  ಇಲ್ಲಿ ವಿಚಿತ್ರವೆಂದರೆ  ಸತ್ತವರು ಕೂಡ ಕೋರ್ಟಿಗೆ ಹೋಗಿರುವುದು ಇತಿಹಾಸದಲ್ಲಿ ಪ್ರಥಮ ಎಂದು ಅವರು ಲೇವಡಿ ಮಾಡಿದರು.
ಭೂ ಅಭಿವೃದ್ಧಿ ಬ್ಯಾಂಕಿನ ನಿಕಟಪೂರ್ವ   ಅಧ್ಯಕ್ಷ,ಹಾಲಿ ನಿರ್ದೇಶಕ ಸುದರ್ಶನ ಜೈನ್ ಮಾತನಾಡಿ, 874 ಮಂದಿಯ ರಿಟ್ ಪಿಟಿಶನ್ ಆಧಾರದಲ್ಲಿ ಮತದಾನ ಹಕ್ಕು ಚಲಾವಣೆ ಕುರಿತು ಕೋರ್ಟ್ ಮೂಲಕ ಆದೇಶ ಪಡೆದಿದ್ದರು. ಆದರೆ ಅವರಲ್ಲಿ ಸದಸ್ಯರಲ್ಲದವರೂ ಇದ್ದಾರೆ. 634 ಮಂದಿಗೆ ಬ್ಯಾಂಕಿನ ಷೇರ್ ಇಲ್ಲ, ಬ್ಯಾಂಕಿಗೆ ಸಂಬಂಧವೇ ಇಲ್ಲದವರು ಹೇಗೆ ಮತದಾನ ಮಾಡಿದರು ಎಂದು ಪ್ರಶ್ನಿಸಿದರು. ಇವರ ಪೈಕಿ 22 ಮಂದಿ ಮೃತಪಟ್ಟವರು ಎಂಬ ಅಂಶ ನಮಗೆ ಗೊತ್ತಾಗಿದೆ ಎಂದವರು ತಿಳಿಸಿದರು.  ಮರು ಚುನಾವಣೆ ಬಯಸುತ್ತಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ ರೈ ಹಾಗೂ ಸುದರ್ಶನ್ ಜೈನ್ ನ್ಯಾಯಾಲಯ ನೀಡುವ ತೀರ್ಪಿಗೆ ಬದ್ದರಾಗಿದ್ದೆವೆ ಎಂದರು.ಬ್ಯಾಂಕಿನ ನಿರ್ದೇಶಕ ಸ್ಥಾನಗಳಿಗೆ ಜ.25 ರಂದು ನಡೆದ ಚುನಾವಣೆಯಲ್ಲಿ ಬಿ.ಮೂಡ ಕ್ಷೇತ್ರ್ ದಲ್ಲಿ ಬ್ಯಾಂಕಿನ ಮರಣ ಹೊಂದಿರುವ ಸದಸ್ಯರು, ಸಾಲ ಸುಸ್ತಿದಾರರು,ಅನರ್ಹರ ಹೆಸರಿನಲ್ಲಿ ಮತದಾನ  ಮಾಡಲಾಗಿದ್ದು ,ಈ ಬಗ್ಗೆ ಕೂಡ ಕೋರ್ಟಿನಲ್ಲಿ ಮರುದಾವೆ ಹಾಕಲಾಗಿದೆ ಎಂದು ಜಿಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಶೆಟ್ಟಿ ಮಾಣಿ, ಜಿಪಂ ಸದಸ್ಯ ಪದ್ಮಶೇಖರ ಜೈನ್, ಪ್ರಮುಖರಾದ ಪರಮೇಶ್ವರ ಮೂಲ್ಯ, ಸುಭಾಶ್ಚಂದ್ರ ಜೈನ್,ಶಿವಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

 

By Suddi9

Leave a Reply

Your email address will not be published. Required fields are marked *