ವಾಮದಪದವು :ಸರಕಾರಿ ಪ್ರಥಮದರ್ಜೆಕಾಲೇಜು ವಾಮದಪದವು ಇಲ್ಲಿನ ಕ್ರೀಡಾಂಗಣದಲ್ಲಿಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಶ್ರೀ ಹೆಚ್.ವಿ.ಕಮಲೇಶ್‍ರೋಲಿಂಗ್‍ಟ್ರೋಗಾಗಿ ಮಹಿಳೆಯರ ಖೋ ಖೊ ಪಂದ್ಯಾಟವನ್ನು ಉದ್ಘಾಟಿಸಿದ ಸಂಗಬೆಟ್ಟುಕ್ಷೇತ್ರದಜಿಲ್ಲಾ ಪಂಚಾಯಿತಿ ಸದಸ್ಯ ಶ್ರೀ ತುಂಗಪ್ಪ ಬಂಗೇರ “ಗ್ರಾಮೀಣ ಭಾಗದಲ್ಲಿ ಈಗಾಗಲೇ ಸಾಕಷ್ಟು ಕ್ರೀಡಾ ಪ್ರತಿಭೆಗಳನ್ನು ಪರಿಚಯಿಸಿದ ಹೆಮ್ಮೆಸರಕಾರಿ ಪ್ರಥಮದರ್ಜೆಕಾಲೇಜು ವಾಮದಪದವಿಗೆಸಲ್ಲುತ್ತದೆ. ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳ ಜೊತೆಗೆ ವಿವಿಧ ಕ್ರೀಡೆಗಳ ತರಬೇತಿಯನ್ನು ನೀಡಿ ವಿ.ವಿ ಮಟ್ಟ ಮತ್ತುರಾಷ್ಟ್ರಮಟ್ಟದ ಪಂದ್ಯಾಟಗಳಿಗೆ ಸಜ್ಜುಗೊಳಿಸುವುದು ಸವಾಲಿನ ಕೆಲಸ, ಈ ನಿಟ್ಟಿನಲ್ಲಿಕಾಲೇಜಿನಕ್ರೀಡಾ ನಿರ್ದೇಶಕರು, ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳು ಅಭಿನಂದನೆಗೆಅರ್ಹರು”ಎಂದು ನುಡಿದರು.ಅಲ್ಲದೇಗ್ರಾಮೀಣ ಮಟ್ಟದಲ್ಲಿ ಈ ರೀತಿ ನಡೆಯುವಕ್ರೀಡಾ ಚಟುವಟಿಕೆಗಳಿಗೆ ಸರ್ಕಾರದ ಪ್ರೋತ್ಸಾಹಅತ್ಯಗತ್ಯಎಂದುಅಭಿಪ್ರಾಯಪಟ್ಟರು.

kho-kho photo

ವೇದಿಕೆಯಲ್ಲಿ ಶ್ರೀ ಯತೀಶ್ ಶೆಟ್ಟಿಅಧ್ಯಕ್ಷರುಚೆನ್ನೈತ್ತೋಡಿಗ್ರಾಮಪಂಚಾಯತ್,ಜಯರಾಮ್ ಶೆಟ್ಟಿ ಕಾಪು ಸದಸ್ಯರುಗ್ರಾಮ ಪಂಚಾಯತ್‍ಚೆನ್ನೈತ್ತೋಡಿ,ಕ್ರೀಡಾಕೂಟದ ಬಹುಮಾನಗಳ ಪ್ರಾಯೋಜಕರಾದ ಶ್ರೀ ಭೋಜರಾಜ ಶೆಟ್ಟಿಕೊರಗಟ್ಟೆ, ಶ್ರೀಮತಿ ಸುಲೋಚನ ಜಿ.ಕೆ.ಭಟ್, ಮಾಜಿಅಧ್ಯಕ್ಷರು ಬಾಲಭವನ,ಜಯಪ್ರಕಾಶ್ ಶೆಟ್ಟಿ ಬುಳೇರಿ, ಶ್ರೀ ಪುರುಷೋತ್ತಮ ಶೆಟ್ಟಿಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ, ಶ್ರೀ ವಿಜಯರೈಆಲದಪದವು, ಶ್ರೀ ದಿನೇಶ ರೈ ಹರ್ಕಾಡಿ, ಶಿಕ್ಷಕ ರಕ್ಷಕ ಸಂಘದಅಧ್ಯಕ್ಷರಾದ ಶ್ರೀ ಮೋಹನ್‍ದಾಸ್‍ಗಟ್ಟಿಯವರು ಉಪಸ್ಥಿತರಿದ್ದರು. ಕ್ರೀಡಾ ಕಾರ್ಯದರ್ಶಿಗಳಾದ ಆಕಾಶ್‍ತೃತೀಯ ಬಿ.ಎ, ಕು.ಮನವಿ ತೃತೀಯ ಬಿ.ಎಸ್ಸಿ ವೇದಿಕೆಯಲ್ಲಿದ್ದರು. ಸಮಾರಂಭಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶ್ರೀ ಹರಿಪ್ರಸಾದ್ ಬಿ.ಶೆಟ್ಟಿ ವಹಿಸಿದ್ದರು,ಸವಿತ ಮತ್ತುತಂಡದವರು ಪ್ರಾರ್ಥಿಸಿದರು, ವಾಣಿಜ್ಯ ಶಾಸ್ತ್ರ ಮುಖ್ಯಸ್ಥರಾದ ಡಾ.ರವಿ.ಎಂ.ಎನ್. ಸ್ವಾಗತಿಸಿ,ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಶ್ರೀಮತಿ ರೇಷ್ಮ.ಜಿ.ಭಟ್ ವಂದಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ.ಕೃಷ್ಣಮೂರ್ತಿಎನ್.ಬಿ ನಿರೂಪಿಸಿದರು.ಪಂದ್ಯಾಟದಲ್ಲಿ ಮಂಗಳೂರು ವಿ.ವಿಯವಿವಿದಕಾಲೇಜುಗಳಿಂದ ಆಗಮಿಸಿದ 17 ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು. ಕಾರ್ಯಕ್ರಮದಲ್ಲಿತಾಂತ್ರಿಕ ಅಧಿಕಾರಿಗಳು, ತಂಡದ ವ್ಯವಸ್ಥಾಪಕರು, ಆಯೋಜನಾಕಾಲೇಜಿನ ಬೋದಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *