“ಅಮೃತ ಪ್ರಕಾಶ” ಪತ್ರಿಕೆಯ 22ನೇಸರಣಿ ಕಾರ್ಯಕ್ರಮದ ಅಂಗವಾಗಿ ವಿಟ್ಲದ ಉದ್ಯಮಿ ಹಾಗೂ ಲೇಖಕಿ ಶ್ರೀಮತಿ ವೀಣಾ ರಾವ್ ಅವರ ಚೊಚ್ಚಲ ಕಥಾಸಂಕಲನ”ಮರೀಚಿಕೆ ಯ ಬೆನ್ನಟ್ಟಿ”ಫೆಬ್ರವರಿ 6ರಂದು ಬೆಳಿಗ್ಗೆ 10-30ಕ್ಕೆ ನಗರದ ಪತ್ರಿಕಾ ಭವನದಲ್ಲಿ ಬಿಡುಗಡೆ ಆಗಲಿದೆ.ಸಂಘಟಕರೂ, ಚಿಂತಕರೂ, ಲೇಖಕರೂ,ವೈದ್ಯರೂ ಆದ ಡಾ.ಅಣ್ಣಯ್ಯಕುಲಾಲ್ ಉಳ್ತೂರು ಕೃತಿ ಬಿಡುಗಡೆ ಮಾಡುವರು.ಕರಾವಳಿಲೇಖಕಿ,ವಾಚಕಿಯರ ಸಂಘದ ಹಾಗೂ ಭಗಿನಿ ಸಮಾಜದ ಅಧ್ಯಕ್ಷರಾದ ವಿಜಯಲಕ್ಷ್ಮೀ ಭಟ್ ಉಳುವಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.ಸಮಾಜ ಸೇವಕರಾದ ಲಯನ್ ಭಾರತಿರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.”ಅಮೃತ ಪ್ರಕಾಶ” ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ, ಸಾಹಿತಿ ಡಾ.ಮಾಲತಿ ಶೆಟ್ಟಿ ಮಾಣೂರು, ಉಪಸಂಪಾದಕ ಡಾ.ಕಾಸರಗೋಡು ಅಶೋಕ್ ಕುಮಾರ್,ಅಂಕಣಗಾರ್ತಿ ಡಾ.ಅರುಣಾ ನಾಗರಾಜ್ ಉಪಸ್ಥಿತರಿರುವರು.
