ಕಿನ್ನಿಗೋಳಿ:ಪುನರೂರು ಶ್ರೀ ವಿಶ್ವನಾಥ ದೇವಳದ ಸಭಾಂಗಣದಲ್ಲಿ ಮುಲ್ಕಿ ಜನವಿಕಾಸ ಸಮಿತಿಯ ಪದಗ್ರಹಣ ನಡೆಯಿತು.ಪುನರೂರು ಪ್ರತಿಷ್ಠಾನ (ರಿ.) ಅಧ್ಯಕ್ಷ ದೇವಪ್ರಸಾದ್ ಪುನರೂರು ಅಧ್ಯಕ್ಷತೆ ವಹಿಸಿದರು.
ಮುಲ್ಕಿ ಜನವಿಕಾಸ ಸಮಿತಿಯ ನೂತನ ಅಧ್ಯಕ್ಷರಾಗಿ ಜೀವನ್ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ಶೋಭಾ ರಾವ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭ ಪುನರೂರು ಪ್ರತಿಷ್ಠಾನ (ರಿ.) ಗೌರವಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಮತ್ತು ಹೆಚ್.ಕೆ ಉಷಾರಾಣಿ, ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು, ಮುಲ್ಕಿ ಜನವಿಕಾಸ ಸಮಿತಿಯ ಉಪಾಧ್ಯಕ್ಷ ಪ್ರಾಣೇಶ್ ಭಟ್ ದೇಂದಡ್ಕ, ಕಾರ್ಯದರ್ಶಿಗಳಾದ ದಾಮೋದರ ಶೆಟ್ಟಿ ಮತ್ತು ಶಶಿಕರ ಕೆರೆಕಾಡು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಪಿ. ಎಸ್. ಸುರೇಶ್ ರಾವ್, ಗೀತಾ ಶೆಟ್ಟಿ, ಭಾಗ್ಯ ರಾಜೇಶ್ ಉಪಸ್ಥಿತರಿದ್ದರು.
