ಬಂಟ್ವಾಳ : ಯಕ್ಷಗಾನ ಕಲಾವಿದ,ಆರ್ಥಧಾರಿ ಅಜೆಕಲ ಹರಿಶ್ಚಂದ್ರ ಶೆಟ್ಟಿ(70) ಅವರು ಹೃದಯಾಘಾತಕ್ಕೊಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ. ಬಂಟ್ವಾಳ ಸಮೀಪದ ಅಜೆಕಲ ನಿವಾಸಿಯಾಗಿರುವ ಇವರು ಬಂಟ್ವಾಳ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುವ ವಾರದ ಯಕ್ಷಗಾನ ಕೂಟದಲ್ಲಿ ನಿತ್ಯ ಆರ್ಥಧಾರಿಯಾಗಿ ಭಾಗವಹಿಸಿ , ವೆಂಕಟರಮಣ ದೇವಳದ ಯಕ್ಷಗಾನ ಸಂಘವನ್ನು ಉಳಿಸಿ ಬೆಳೆಸುವಲ್ಲಿ ಇವರ ಕೊಡುಗೆ ಅಪಾರವಾಗಿದೆ.

ಯಕ್ಷಗಾನ ಕ್ಷೇತ್ತದ ಧೀಮಂತ ಅರ್ಥಧಾರಿಗಳಾದ ಶೇಣಿ , ತೆಕ್ಕಟ್ಟೆ , ಸಾಮಗರಂತ ಮೇರು ಕಲಾವಿದರೊಂದಿಗೆ ಅರ್ಥ ಮಾತಾಡಿ ಸೈ ಎನಿಸಿಕೊಂಡವರು.ಅಮ್ಟಾಡಿ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಗಡಿಪ್ರಧಾನರಲ್ಲಬ್ಬರಾಗಿದ್ದು,ಜನಸಂ
