ಬಂಟ್ವಾಳ: ಇಲ್ಲಿನ ಸಜೀಪಮೂಡ ಗ್ರಾಮದ ನಗ್ರಿ ಶಾಂತಿನಗರದಲ್ಲಿ ಭಾನುವಾರ ಬೆಂಗಳೂರಿನ ಚಾಮರಾಜನಗರ ನೋಂದಣಿಯ ಇನೋವಾ ಕಾರಿನಲ್ಲಿ ರಕ್ತಸಿಕ್ತವಾಗಿ ಗಂಡಸಿನ ಶವ ಪತ್ತೆಯಾದ ಪ್ರಕರಣ ಕೊಲೆ ಪ್ರಕರಣವಾಗಿ ತಿರುವು ಪಡೆದಿದೆ. ಕುಖ್ಯಾತ ರೌಡಿಯೊರ್ವನ ಕೊಲೆಗೈದು, ಹಂತಕರು ಶವವನ್ನು ಕಾರಿನಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಕೇರಳಮೂಲದ ನಿವಾಸಿತಸ್ಲೀಮ್(45)ಕೊಲೆಗೀಡಾದ ವನಾಗಿದ್ದಾನೆ.

IMG-20200202-WA0067ಈತನ ಮೇಲೆ ಕೊಲೆ,ಕೊಲೆಯತ್ನ,ರಾಬರಿ ಪ್ರಕರಣವಿದ್ದು, ನಟೋರಿಯಸ್ ರೌಡಿ ಜಿಯಾ ಗ್ಯಾಂಗ್ ನಲ್ಲಿ ಈತ ಗುರುತಿಸಿಕೊಂಡಿದ್ದ. ಗುಲ್ಬರ್ಗದಿಂದ ಕಿಡ್ನಾಪ್ : 2019 ರಲ್ಲಿಬಂದರು ಠಾಣಾ ವ್ಯಾಪ್ತಿಯಲ್ಲಿ ಅರುಣ್ ಜ್ಯುವೆಲ್ಲರಿಯಲ್ಲಿ ನಡೆದ ರಾಬರಿ ಪ್ರಕರಣದಲ್ಲಿ ಆರೋಪಿಯಾಗಿದ್ದು ತಸ್ಲೀಂ ಗುಲ್ಬರ್ಗ ಜೈಲು ಸೇರಿದ್ದ, ಗುರುವಾರ ಈತನಿಗೆ ಅಲ್ಲಿನ ನ್ಯಾಯಾಲಯದಲ್ಲಿ ಜಾಮೀನು ದೊರಕಿದ್ದು,ಈತನಿಗೆ ಸಹೋದರರು ಜಾಮೀನು ಕೊಡಿಸಿದ್ದರು, ಜೈಲಿನಿಂದ ಹೊರಬಂದಿದ್ದ ಈತನನ್ನು ಎರಡು ಕಾರಿನಲ್ಲಿ ಬಂದಿದ್ದ ಗ್ಯಾಂಗ್ ವೊಂದು ಒಂದು ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಬಂದಿದೆ.ಈ ಬಗ್ಗೆ ಗುಲ್ಬರ್ಗ ಪೊಲೀಸ್ ಠಾಣೆಯಲ್ಲಿ ಅತನ ಅಪಹರಣ ಪ್ರಕರಣ ಕೂಡ ದಾಖಲಾಗಿದೆ ಎಂದು ಬಂಟ್ವಾಳ ನಗರ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

IMG-20200202-WA0066ಕುತ್ತಿಗೆ ಬಿಗಿದು ಚೂರಿ ಇರಿದು ಕೊಲೆ: ಜೈಲಿನಿಂದ ಹೊರಬಂದ ತಸ್ಲೀಂನನ್ನು ಅಪಹರಿಸಿ ಕಾರಿನಲ್ಲಿ ಎತ್ತಾಕಿಕೊಂಡು ಬಂದ ಹಂತಕರ ತಂಡ ಅತನನ್ನು ಕಾರಿನೊಳಗೆಯೇ ಕುತ್ತಿಗೆಗೆ ಹಗ್ಗ ಬಿಗಿದು ಬಳಿಕ ಹೊಟ್ಟೆಯ ಭಾಗಕ್ಕೆ ಚೂರಿಯಿಂದ ಇರಿದು ಕೊಲೆ ಕೊಲೆಗೈದಿದ್ದಾರೆ.ಕಾರಿನ ಹಿಂಬದಿಯ ಸೀಟಿನಲ್ಲಿಯೇ ಕೊಲೆ ಮಾಡಲಾಗಿದ್ದು, ಯಾವುದೋ ನಿರ್ಜನ ಪ್ರದೇಶದಲ್ಲಿ ಕೃತ್ಯ ನಡೆಸಿ ಬಳಿಕ ಸಜೀಪಮೂಡಗ್ರಾಮದ ನಗ್ರಿಯ ಶಾಂತಿನಗರ ಎಂಬಲ್ಲಿ ರಸ್ತೆಯ ಬದಿಯಲ್ಲಿ ಗುಡ್ಡ ಪ್ರದೇಶದಲ್ಲಿ ಕಾರನ್ನು ಬಿಟ್ಟು ಮತ್ತೊಂದು ವಾಹನದಲ್ಲಿ ಪರಾರಿಯಾಗಿರಬೇಕೆಂದು ಪೊಲೀಸರ ತನಿಖೆಯಲ್ಲಿ ಬಯಲಿಗೆ ಬಂದಿದೆ.

IMG-20200202-WA0066
ಬೆಳಿಗ್ಗೆ ಸುಮಾರು 10 ಗಂಟೆಯ ನಂತರ ಕೆಎ 53-ಪಿ- 3339 ನಂಬರಿನ ಇನೋವಾ ಕಾರಿನ ನಾಲ್ಕು ಬಾಗಿಲಿನ ಕನ್ನಡಿ ಮುಚ್ಚಿದ ಸ್ಥಿತಿಯಲ್ಲಿ ಮಧ್ಯಾಹ್ನದ ವರಗೂ ಅನಾಥವಾಗಿ ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.ಬಂಟ್ವಾಳ ನಗರ ಪೊಲೀಸರು ಬಂದು ಪರಿಶೀಲಿಸಿದಾಗ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತ ಸ್ಥಿತಿಯಲ್ಲಿ ರಕ್ತಸಿಕ್ತವಾದ ಗಂಡಸಿನ ಶವ ಕಂಡುಬಂದಿದೆ. ಬಳಿಕ ತನಿಖೆ ಆರಂಭಿಸಿದ ಪೊಲೀಸರು ಮೃತದೇಹದ ಗುರುತು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.ಇದೀಗ ತಸ್ಲೀಂ ಕೊಲೆ ಖಾಲಿಯಾ ರಫೀಕ್ ಕೊಲೆಗೆ ಪ್ರತೀಕಾರ ತೀರಿಸಲಾಗಿದೆಯೇ ಅಥವಾ ಇನ್ಯಾವುದೋ ಕಾರಣಕ್ಕೆ ಕೊಲೆ ನಡೆದಿದೆಯೇ ಎಂಬುದು ಪೊಲೀಸರ ತನಿಖೆಯಿಂದಷ್ಟೇ ತಿಳಿದುಬರಬೇಕಾಗಿದೆ.

IMG-20200202-WA0065ಇದೊಂದು ಪೂರ್ವಯೋಜಿತ ಸಂಚು ಎಂದು ಕಂಡುಕೊಂಡಿರುವ ಪೊಲೀಸರು ಸುಫಾರಿ ಕಿಲ್ಲರ್ ಗಳು ಈ ಕೃತ್ಯ ನಡೆಸಿರಬೇಕೆಂದು ಸಂಶಯ ವ್ಯಕ್ತಪಡಿಸಿದ್ದಾರೆ. ಯಾರಿತ ತಸ್ಲೀಂ ? : ಕೊಲೆಗೀಡಾದ ತಸ್ಲೀಂ ಕೊಲೆಗೀಡಾ 2017 ರಲ್ಲಿ ಉಳ್ಳಾಲ ದಲ್ಲಿ ನಡೆದ ಖಾಲಿಯಾ ರಫೀಕ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ.ಬಳಿಕ ಕೊಲೆಯತ್ನ,ರಾಬರಿ ಪ್ರಕರಣದಲ್ಲಿ ಆರೋಪಿಯಾಗಿದ್ದ,ಹಾಗೆಯೇ ಪ್ರಮುಖವಾಗಿ ಏಳು ತಿಂಗಳ ಹಿಂದೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಕೊಲೆಗೈಯುವ ಬೆದರಿಕೆ ಒಡ್ಡಿ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ ಪ್ರಕರಣದಲ್ಲು ಈತ ಆರೋಪಿಯಾಗಿದ್ದ. ಉಡುಪಿ ಎಸ್.ಪಿ.ವಿಷ್ಟುವರ್ದನ್, ಅಡಿಸನಲ್ ಎಸ್.ಪಿ.ವಿಕ್ರಂ ಅಮ್ಟೆ, ಮಂಗಳೂರು ಡಿ.ಸಿ.ಐ.ಬಿ ಇನ್ಸ್ ಪೆಕ್ಟರ್ ಚೆಲುವರಾಜು, ಡಿವೈಎಸ್ಪಿ ವೆಲೆಂಟಿನ್ ಡಿಸೋಜ, ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ನಗರ ಠಾಣಾ ಎಸ್. ಐ.ಅವಿನಾಶ್ ಮತ್ತವರ ಸಿಬಂದಿಗಳು ಭೇಟಿನೀಡಿ ಪರಿಶೀಲನೆ ನಡೆಸಿದರು.
ಸ್ಥಳಕ್ಕೆ ಬೆರಳಚ್ಚು ತಜ್ಞರನ್ನು ಕರೆಸಿ ತನಿಖೆ ನಡೆಸಲಾಗಿದೆ. ಪರಿಶೀಲನೆ ನಡೆಸಿದ್ದಾರೆ.ಮಂಗಳೂರು ವೆನ್ಲಾಕ್ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಇರಿಸಲಾಗಿದೆ. ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

By Suddi9

Leave a Reply

Your email address will not be published. Required fields are marked *