ಬಂಟ್ವಾಳ : ಅಪ್ಪಟ ದೇಶೀಯ ಕ್ರೀಡೆ ಕಬಡ್ಡಿ ಯುವಕರಿಗೆ ಸ್ಪೂರ್ತಿ ಮತ್ತು ನಾಯಕತ್ವವನ್ನು ನೀಡುತ್ತದೆ. ಯುವಕರು ಇಂತಹ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಸದೃಢರಾಗಿ ಸ್ವಸ್ಥ ,ಬಲಿಷ್ಟ ರಾಷ್ಟ್ರ ನಿರ್ಮಾಣದಲ್ಲಿ ಭಾಗಿಗಳಾಗಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪಾಡಿಗುತ್ತು ಅವರು ಹೇಳಿದರು.

0202pkt1
ಬಂಟ್ವಾಳ ತಾ. ಸರಪಾಡಿ ಪ್ರೌಢ ಶಾಲಾ ಮೈದಾನದಲ್ಲಿ ಸರಪಾಡಿ ರಾಜಯೋಗ ಸರಪಾಡಿ ಮತ್ತು ಸರಪಾಡಿ ಫ್ರೆಂಡ್ಸ್ ವತಿಯಿಂದ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಹೋರಾಟಗಾರ ಸರಪಾಡಿ ದಿ.ಎನ್. ಸುಬ್ಬಣ್ಣ ಶೆಟ್ಟಿ ಅವರ ಸ್ಮರಣಾರ್ಥ ಫೆ.1ರಂದು ಜರಗಿದ ಅವಿಭಜಿತ ದ.ಕ. ಮತ್ತು ಕಾಸರಗೋಡು ಜಿಲ್ಲಾ ಮಟ್ಟದ ಹೊನಲು ಬೆಳಕಿನ ಪೆÇ್ರ ಮಾದರಿಯ ಮುಕ್ತ ಮತ್ತು 65 ಕೆ.ಜಿ. ವಿಭಾಗದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಪಾಡಿ ಸುಬ್ಬಣ್ಣ ಶೆಟ್ಟಿ ಅವರು ಸರಪಾಡಿಗೆ ಹಲವಾರು ಸವಲತ್ತುಗಳನ್ನು ದೊರಕಿಸಿಕೊಟ್ಟಿದ್ದಾರೆ. ಅವರ ಸ್ಮರಣಾರ್ಥ ಕ್ರೀಡಾಕೂಟ ಆಯೋಜನೆ ಯುವಕರಿಗೆ ನೀಡುವ ಪೆÇ್ರೀತ್ಸಾಹವಾಗಿದೆ ಎಂದರು.
ಈ ಸಂದರ್ಭದಲ್ಲಿ ನಿರಂತರ 36 ವರ್ಷಗಳಿಂದ ಕಬಡ್ಡಿ ಪಂದ್ಯಾಟ ಆಯೋಜಿಸುತ್ತಿರುವ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ, ಜಿ.ಪಂ. ಸದಸ್ಯ ಎಂ.ತುಂಗಪ್ಪ ಬಂಗೇರ ಅವರನ್ನು ಸಮ್ಮಾನಿಸಲಾಯಿತು. ಸಮ್ಮಾನಕ್ಕೆ ಪ್ರತಿಕ್ರಿಯಿಸಿದ ತುಂಗಪ್ಪ ಬಂಗೇರ ಅವರು, ವಿಶ್ವದೆಲ್ಲಡೆ ಕಬಡ್ಡಿ ಜನಪ್ರಿಯವಾಗುತ್ತಿದ್ದು, ಆಟಗಾರರಿಗೆ ಅವಕಾಶ ದೊರೆಯುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕಬಡ್ಡಿ ಕ್ರೀಡೆ ಇನ್ನಷ್ಟು ಬೆಳೆಯುಂತಾಗಲು ಹಾಗೂ ಕ್ರೀಡಾಪಟುಗಳನ್ನು ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಸರಕಾರ ಹೆಚ್ಚಿನ ಅನುದಾನ ನೀಡಬೇಕು ಎಂದರು.
ಬಂಟ್ವಾಳ ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ಬಿಜೆಪಿ ಕ್ಷೇತ್ರಾಧ್ಯಕ್ಷ ದೇವದಾಸ ಶೆಟ್ಟಿ, ಉದ್ಯಮಿ ಸಾಯಿ ಗಿರಿಧರ ಶೆಟ್ಟಿ ನಡುಮೊಗರುಗುತ್ತು, ಸರಪಾಡಿ ಗ್ರಾ.ಪಂ.ಉಪಾಧ್ಯಕ್ಷ ದಯಾನಂದ ಶೆಟ್ಟಿ ಮುನ್ನಲಾಯಿ, ಮಣಿನಾಲ್ಕೂರು ಸೇ.ಸ.ಸಂಘದ ಅಧ್ಯಕ್ಷ ರಾಧಾಕೃಷ್ಣ ಮಯ್ಯ, ಜ್ಯೋತಿಷ ವಿದ್ವಾನ್ ರತ್ನಾಕರ ಭಟ್ ಸರಪಾಡಿ, ದಂತ ವೈದ್ಯ ಡಾ. ಬಾಲಚಂದ್ರ ಶೆಟ್ಟಿ, ಪ್ರಗತಿಪರ ಕೃಷಿಕ ಸುರೇಶ್ ಶೆಟ್ಟಿ ಮಿಯಾರು, ಜಯಪ್ರಕಾಶ್ ಶೆಟ್ಟಿ ಉಪ್ಪಿನಂಗಡಿ, ಗ್ರಾ.ಪಂ.ಸದಸ್ಯ ನಾಣ್ಯಪ್ಪ ಪೂಜಾರಿ, ಸರಪಾಡಿ ಸ.ಪ್ರೌ.ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ಗಿರಿಧರ ಎಸ್, ಮಾಜಿ ಕಾರ್ಯಾಧ್ಯಕ್ಷ ಪದ್ಮಪ್ಪ ಪೂಜಾರಿ, ಮಣಿನಾಲ್ಕೂರು ಸೇ.ಸ.ಸಂಘದ ಮುಖ್ಯಕಾರ್ಯನಿರ್ವಹಣಾ„ಕಾರಿ ಸುಧಾಕರ ಶೆಟ್ಟಿ ಎಚ್., ಕ್ರೀಡಾ ಕೂಟ ಸಂಚಾಲಕ ಶಶಿಕಾಂತ್ ಶೆಟ್ಟಿ ಆರುಮುಡಿ, ಪದಾ„ಕಾರಿಗಳಾದ ದಿನೇಶ್ ಗೌಡ ನೀರೊಲ್ಬೆ, ಸುದರ್ಶನ್ ಬಜ, ಸಾಂತಪ್ಪ ಪೂಜಾರಿ ಹಟದಡ್ಕ, ಮುರಳೀಶ ಶೆಟ್ಟಿ, ರಕ್ಷಿತ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಸಂಚಾಲಕ ಜೋಕಿಂ ಪಿಂಟೋ ಸ್ವಾಗತಿಸಿದರು. ಸಂಘಟಕ, ಗ್ರಾ.ಪಂ.ಸದಸ್ಯ ಎನ್.ಧನಂಜಯ ಶೆಟ್ಟಿ ವಂದಿಸಿದರು.ಚೆನ್ನಪ್ಪ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *