ವಾಮಂಜೂರು : ಭಾವೈಕ್ಯತೆಗೆ ನಿಜವಾದ ಅರ್ಥ ಕಲ್ಪಿಸಬಹುದಾದ ದಿನ ಇಂದು. ಜ್ಞಾನ ಮತ್ತು ಕ್ರಿಯಾಶಕ್ತಿಯಿಂದ ಒಬ್ಬರು ಸಂಪೂರ್ಣ ವ್ಯಕ್ತಿಯಾಗುತ್ತಾರೆ. ಪ್ರಸಕ್ತ ಕಾಲಘಟ್ಟದಲ್ಲೂ `ಜಾತಿ’ ಬೇಕೇ ಎಂಬ ಪ್ರಶ್ನೆ ಎದುರಾದಾಗ ಅಥವಾ ಜಾತಿ ಕೇಳುವ ವರ್ಗ ಇರುವವರೆಗೆ ಜಾತಿಯೂ ಬೇಕು, ಸಂಘಟನೆಯೂ ಬೇಕು. ದೇಶಕ್ಕೆ ಅಥವಾ ವಿಶ್ವಕ್ಕೆ ಬಂಟ ಸಮಾಜದಿಂದ ಯಾವ ಕೊಡುಗೆ ನೀಡಲು ಸಾಧ್ಯವಿದೆ ಎಂಬುದರ ಬಗ್ಗೆ ಯೋಚಿಸಬೇಕು. ವ್ಯಕ್ತಿ ಬದಲು ಸಮುದಾಯವಾಗಿ ಬಂಟ ಸಮಾಜ ರಾಜಕೀಯದಲ್ಲಿ ಬೆಳೆಯುವ ಅಗತ್ಯವಿದೆ ಎಂದು ಆಸರೆ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ ಮಾಲಾಡಿ ಅಭಿಪ್ರಾಯಪಟ್ಟರು.

ಗುರುಪುರ ಬಂಟರ ಮಾತೃ ಸಂಘ(ರಿ) ಭಾನುವಾರ ವಾಮಂಜೂರಿನ ಶ್ರೀ ಅಮೃತೇಶ್ವರ ದೇವಸ್ಥಾನದ ಬಳಿ ಆಯೋಜಿಸಲಾದ ಬಂಟರ ಕಲಾ ಪ್ರತಿಭೆಗಳ ಪ್ರತಿಬಿಂಬಿಸುವ `ಬಂಟ ಕಲಾವೀಳ್ಯ-2020′ ಅಂತರ್ ಬಂಟರ ಸಂಘಗಳ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಇತಿಹಾಸದಲ್ಲಿ ನಾವು ಸೋಲುಗಳ ಸರಮಾಲೆ ಓದಿದ್ದೇವೆ. ಆದರೆ ಭಾರತದಲ್ಲಿ ಆಗಿ ಹೋಗಿರುವ ಸಂಘರ್ಷಮಯ ಇತಿಹಾಸದ ಬಗ್ಗೆ ತಿಳಿದವರ ಸಂಖ್ಯೆ ತೀರಾ ಕಡಿಮೆ. ನಾವೀಗ ನಮ್ಮ ಇತಿಹಾಸ, ಸಂಸ್ಕøತಿ ಮರೆತು ಪಾಶ್ಚಾತ್ಯ ವಿಷಯ ಮೆಲುಕು ಹಾಕುತ್ತೇವೆ. ಇದರ ಹೊರತಾಗಿ ನಮ್ಮ ಮಕ್ಕಳಿಗೆ ಇತಿಹಾಸದ ಸಂಘರ್ಷ ತಿಳಿಸಿಕೊಡಬೇಕಾಗಿದೆ. ಬಂಟ ಸಮಾಜದಲ್ಲೂ ಬಡವರಿದ್ದು, ಇಂತಹವರ ಏಳ್ಗೆಗೆ ನಾವೆಲ್ಲರೂ ಕೈಜೋಡಿಸಬೇಕು ಎಂದರು.

ಶ್ರೀ ದೇವಿ ಎಜ್ಯುಕೇಶನ್ ಟ್ರಸ್ಟ್(ರಿ) ಮಂಗಳೂರು ಇದರ ಕಾರ್ಯದರ್ಶಿ ಮೈನಾ ಎಸ್ ಶೆಟ್ಟಿ ಮಾತನಾಡಿ, ಸ್ಪರ್ಧೆ ಅತ್ಯಗತ್ಯ. ಸ್ಪರ್ಧೆ ಇಲ್ಲದೆ ಒಂದು ಸಮಾಜ ಬೆಳೆಯಲು ಸಾಧ್ಯವಿಲ್ಲ. ಸ್ಪರ್ಧೆ ಇಲ್ಲದೆ ಹೋದಲ್ಲಿ ಜೀವನ ನೀರಸವಾಗಬಹುದು ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಸನ್ಮಾನಿತರಾದ ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ ಎನ್ ರಾಜೇಂದ್ರ ಕುಮಾರ್, ಅಮೃತೇಶ್ವರ ಆಂಗ್ಲ ಮಾಧ್ಯಮ ಶಾಲಾ ಟ್ರಸ್ಟಿ ಸತ್ಯಾ ಎಸ್ ಶೆಟ್ಟಿ, ನ್ಯಾಯವಾದಿ ಜಗದೀಶ ಶೇಣವ, ಗುರುಪುರ ಶ್ರೀ ಮುಂಡಿತ್ತಾಯ ದೈವಸ್ಥಾನದ ಗಡಿಕಾರ ಪ್ರಮೋದ್ ಕುಮಾರ್ ರೈ ದೋಣಿಂಜೆಗುತ್ತು ಮಾತನಾಡಿದರು.
ಗುರುಪುರ ಬಂಟರ ಮಾತೃ ಸಂಘದ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಅಧ್ಯಕ್ಷತೆ ವಹಿಸಿದ್ದ ಸಭಾ ವೇದಿಕೆಯಲ್ಲಿ ಡಾ. ಮಂಜಯ್ಯ ಶೆಟ್ಟಿ(ಆಡಳಿತ ಮೊಕ್ತೇಸರ, ಶ್ರೀಕ್ಷೇತ್ರ ಪೊಳಲಿ), ಸೀತಾರಾಮ ಜಾಣು ಶೆಟ್ಟಿ(ಅಧ್ಯಕ್ಷ, ರಾ.ಬಂ.ಭಾ ಸಂ. ಸಮಿತಿ), ಚಂದ್ರಹಾಸ ರೈ ವಾಮಂಜೂರು, ಮಂಜುನಾಥ ಭಂಡಾರಿ ಶೆಡ್ಡೆ, ರವಿರಾಜ ಶೆಟ್ಟಿ ನಿಟ್ಟೆಗುತ್ತು, ರವೀಂದ್ರನಾಥ ಮಾರ್ಲ ಪೆರ್ಮಂಕಿ, ಲಿಂಗಮಾರು ಬಾಲಕೃಷ್ಣ ಶೆಟ್ಟಿ, ಪೆರ್ಮಂಕಿಗುತ್ತು ಪದ್ಮನಾಭ ಶೆಟ್ಟಿ, ನಾಗರಾಜ ತಿಮಿರಿಗುತ್ತು, ಪ್ರವೀಣ್ ಶೆಟ್ಟಿ ಬೆಳ್ಳಿಬೆಟ್ಟುಗುತ್ತು, ವಿನಯಕುಮಾರ್ ಶೆಟ್ಟಿ ಮಾಣಿಬೆಟ್ಟುಗುತ್ತು, ಉಮೇಶ ಮುಂಡ ಗುರುಪುರ, ಚಂದ್ರಹಾಸ ಶೆಟ್ಟಿ ಪೆರ್ಮಂಕಿಗುತ್ತು, ಓಂಪ್ರಕಾಶ್ ಶೆಟ್ಟಿ ವಾಮಂಜೂರು, ರತ್ನಾಕರ ಶೆಟ್ಟಿ ಎಕ್ಕಾರು, ತನಿಯಪ್ಪ ಪೂಜಾರಿ, ಉಮೇಶ್ ರೈ ಮೇಗಿನಮನೆ, ಉಪೇಂದ್ರ ಶೆಟ್ಟಿ ಬೆಂಗಳೂರು, ಗೋಪಾಲಕೃಷ್ಣ ಭಂಡಾರಿ ನೀರುಮಾರ್ಗ, ರೋಹಿತಾಶ್ವ ಭಂಡಾರಿ ಮರಂಕರಿಯ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.
ಈ ಸಂದರ್ಭದಲ್ಲಿ ಕೃಷಿಕ ರಘು ಅರಿಗ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಸಾಂಸ್ಕøತಿಕ ಕಾರ್ಯದರ್ಶಿ ಅಶ್ವಿನ್ ಶೆಟ್ಟಿ ಬೊಂಡಂತಿಲಗುತ್ತು ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಜಯರಾಮ ರೈ ಉಳಾಯಿಬೆಟ್ಟು ಸ್ವಾಗತಿಸಿದರೆ, ರಾ.ಬಂ.ಭಾ.ಸಂ. ಸಮಿತಿ ಕಾಯದರ್ಶಿ ಚಂದ್ರಹಾಸ ಶೆಟ್ಟಿ ನಾರಳ ವಂದಿಸಿದರು. ಬಳಿಕ ಅಂತರ್ ಬಂಟರ ಸಂಘಗಳ ಕಲಾವಿದರಿಂದ `ಭಾರತ’-ಸಾಧಕರು ಕಂಡಂತೆ’ ಸ್ಪರ್ಧಾ ಕಾರ್ಯಕ್ರಮ ಆರಂಭಗೊಂಡಿತು.
