ಮಂಗಳೂರು ತಾಲೂಕಿನ ವಾಮಂಜೂರಿನ ಕೆತ್ತಿಕಲ್ಲಿನಿಂದ ತಾರಿಗುಡ್ಡೆ ಪೆರ್ಮಂಕಿಯವರೆಗೆ 1 ಕೋಟಿ 50 ಲಕ್ಷ ರೂಪಾಯಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೆ ಸೋಮವಾರ ಮಂಗಳೂರು ನಗರ ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿಯವರು ಗುದ್ದಲಿ ಪೂಜೆ ನೆರವೇರಿಸಿದರು.
ತಮ್ಮ ಬಹುವರ್ಷಗಳ ಬೇಡಿಕೆಯನ್ನು ಶೀಘ್ರದಲ್ಲಿ ಈಡೇರಿಸಿ ಅಭಿವೃದ್ಧಿಗೆ ಕಾರಣೀಕೃತರಾಗಿರುವ ಶಾಸಕ ಡಾ. ಭರತ್ ಶೆಟ್ಟಿಯವರನ್ನು ಸ್ಥಳೀಯ ಮುಖಂಡರು, ಕಾರ್ಯಕರ್ತರು, ನಾಗರಿಕರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮನಪಾ ಸದಸ್ಯೆ ಹೇಮಲತಾ ರಘು ಸಾಲಿಯಾನ್, ಪ್ರಮುಖರಾದ ರಾಜೇಶ್ ಕೊಟ್ಟಾರಿ, ಅನಿಲ್ ರೈ, ಗೋಕುಲದಾಸ ಶೆಟ್ಟಿ, ಸಚಿನ್ ಹೆಗ್ಡೆ, ಕಿಶೋರ್ ಕುಮಾರ್, ಹರೀಶ್ ಹೊಸಮನೆ, ಸುರೇಖ ಪೂಜಾರಿ, ಶಶಿಕುಮಾರ್, ನಾಗೇಶ್ ಕಾಪೆಟ್ಟು ಮತ್ತಿತ್ತರರು ಉಪಸ್ಥಿತರಿದ್ದರು.
