ವಿಟ್ಲ ಲಯನ್ಸ್ ಕ್ಲಬ್ ಸದಸ್ಯೆ ಪುಷ್ಪಾಲತಾ ತನ್ನ ಜನ್ಮದಿನದ ಪ್ರಯುಕ್ತ ಕಂಬಳಬೆಟ್ಟು ನಿವಾಸಿ ಪಾಶ್ರ್ವವಾಯು ಪೀಡಿತ ವನರಾಜನ ಆಚಾರ್ಯ ಇವರ ಮಗಳು 4 ನೇ ತರಗತಿ ವಿದ್ಯಾರ್ಥಿನಿ ವರ್ಷಿನಿ ಮತ್ತು ವಿಟ್ಲ ಜೋಗಿಮಠ ನಿವಾಸಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ತುಕ್ರಪ್ಪ ಇವರ ಮಗ ಭರತ್ರಾಜ್ ಇವರಿಗೆ ಧನಸಹಾಯ ನೀಡಿದರು. ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಮನೋಜ್ ರೈ, ಸದಸ್ಯ ರವಿಶಂಕರ್, ಅನಘಾ ಮತ್ತು ಸದಾಶಿವ ಉಪಸ್ಥಿತರಿದ್ದರು.


