ಸ್ನಾತಕೊತ್ತರ ಸಮಾಜಕಾರ್ಯ ವಿಭಾಗ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ ಹಾಗೂ ಲಯನ್ಸ್ ಕ್ಲಬ್ ವಿಟ್ಲ ಇದರ ನೇತೃತ್ವದಲ್ಲಿ ಸಮುದಾಯ ದಂತ ವಿಭಾಗ ಯೇನಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ, ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಯೇನಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ದೇರಳಕಟ್ಟೆ, ಎಸ್ಸಿಲೋರ್ ವಿಷನ್ ಫೌಂಡೇಶನ್ ಬೆಂಗಳೂರು ಇದರ ಸಹಯೋಗದೊಂದಿಗೆ ಕೊಡಂಗಾಯಿ ಶಾಲೆಯಲ್ಲಿ ಉಚಿತ ವೈದ್ಯಕೀಯ, ಕಣ್ಣು ಮತ್ತು ದಂತ ಚಿಕಿತ್ಸಾ ಶಿಬಿರ ನಡೆಸಲಾಯಿತು.

SHV_4819
ಈ ಶಿಬಿರದ ಉದ್ಘಾಟನೆಯನ್ನು ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪಲ್ತಡ್ಕ ನೆರವೇರಿಸಿದರು. ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷ ನಾರಾಯಣ ಭಟ್ ಪಳ್ಳಿಗದ್ದೆ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ| ಲೋಕೇಶ್, ಡಾ| ಆತಿಫಾ, ಡಾ| ಫರಾ, ಉಪನ್ಯಾಸಕ ಪ್ರಸನ್ನಕುಮಾರ್, ಮುಖ್ಯ ಶಿಕ್ಷಕಿ ಸರೋಜ ಎ, ಲಯನ್ಸ್ ಕ್ಲಬ್ ಕೋಶಾಧಿಕಾರಿ ಖಲಂದರ್, ಸದಸ್ಯರುಗಳಾದ ಇಕ್ಬಾಲ್ ಹಾನೆಸ್ಟ್ ಮತ್ತು ಸುದೇಶ್ ಭಂಢಾರಿ ಹಾಗೂ ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ರೇಖಾ ಕರ್ಕಳ ಭಾಗವಹಿಸಿದ್ದರು.
ಸಮಾಜ ಕಾರ್ಯ ವಿದ್ಯಾರ್ಥಿಗಳಾದ ದೀಕ್ಷಿತಾ ಸ್ವಾಗತಿಸಿದರು. ಜ್ಯೋತಿ ಪ್ರಾರ್ಥಿಸಿದರು. ಸ್ವಾತಿ ವಂದಿಸಿ ರಮ್ಯಾ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *