ಕೈಕಂಬ:ಕುಳವೂರು ಕಡೆಗುಂಡ್ಯದ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವವು ಶನಿವಾರ ಮತ್ತು ಆದಿತ್ಯವಾರ ಜರಗಿತು. ಕಡೆಗುಂಡ್ಯಗುತ್ತಿನ ಮನೆಯಲ್ಲಿ ನಾಗದೇವರಿಗೆ ತಂಬಿಲ ಸೇವೆ, ದೈವಗಳಿಗೆ ನವಕ ಪ್ರದಾನ, ಪರ್ವಸೇವೆ, ಕಲಾಶಾರಾಧನೆ, ಕಲಶಾಭಿಷೇಕ, ರಾತ್ರಿ ರಂಗಪೂಜೆ, ಉತ್ಸವಬಲಿ, ವಸಂತಕಟ್ಟೆ ಪೂಜೆ, ಬಟ್ಟಲುಕಾಣಿಕೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು,ಹಾಗು  ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
20vp jathrosthava
ಸಾಂಸ್ಕ್ರತಿಕ ಕಾರ್ಯಕ್ರಮ:ಜಾತ್ರಾಮಹೋತ್ಸವದ ಅಂಗವಾಗಿ ಎರಡು ದಿನವೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು ವಿಠ್ಠಲ ನಾಯಕ್ ಕಲ್ಲಡ್ಕ ಇವರಿಂದ ಗೀತಾ -ಸಾಹಿತ್ಯ -ಸಂಭ್ರಮ, ಎಂಬ ವಿನೂತನ ಶೈಲಿಯ ಸಂಗೀತ ಕಾರ್ಯಕ್ರಮ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಬಾಲಪ್ರತಿಭೆ ಜಿನ್ವೀಶ್ ಕೊಟ್ಟಾರಿ ಮತ್ತು ಸ್ಥಳೀಯರಿಂದ ಸಾಂಸ್ಕ್ರತಿಕ ವೈವಿಧ್ಯ, ಶಿವರಂಜಿನಿ ಕಲಾ ಕೇಂದ್ರ ಪೊಳಲಿ ಬೊಕ್ಕಸ ಇದರ ಸದಸ್ಯರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.
20vp jathrosthava-2
ಸನ್ಮಾನ:8 ರ ಹರೆಯದಲ್ಲೇ ಜಿಲ್ಲಾರಾಜೋತ್ಸವ ಪ್ರಶಸ್ತಿ ಯಿಂದ ಪುರಸ್ಕ್ರತನಾಗಿರುವ ಬಾಲಪ್ರತಿಭೆ ಜಿನ್ವೀಶ್ ಕೊಟ್ಟಾರಿ ಮತ್ತು ಯಕ್ಷಗಾನ ಕಲಾವಿದ ವಿಶ್ವನಾಥ ಪೂಜಾರಿ ಯವರನ್ನು ದೇವಳದ ಆಡಳಿತ ಮೊಕ್ತೇಸರ ಪಿ.ಎ. ಶೆಟ್ಟಿ, ಪ್ರಕಾಶ್ ಶೆಟ್ಟಿ, ಶಾಂತಾ ಅಡ್ಯಂತಾಯ, ವಿಜಯಕುಮಾರ್ ಶೆಟ್ಟಿ, ಮತ್ತು ಮುತ್ತೂರು ಪಂಚಾಯತ್ ಸದಸ್ಯ ಪ್ರವೀಣ್ ಆಳ್ವ ಶಾಲು ಹೊಡೆಸಿ ಫಲಪುಷ್ಪಗಳನ್ನು ನೀಡಿ ಸನ್ಮಾನಿಸಿದರು.

By suddi9

Leave a Reply

Your email address will not be published. Required fields are marked *