ಬಂಟ್ವಾಳ : ತಾಲೂಕಿನ ಬಡಾಜೆಗುತ್ತು ಶ್ರೀ ನಾಗದೇವರ ಸನ್ನಿಧಾನದಲ್ಲಿ ನಾಗದರ್ಶನ ಹಾಗೂ ಮಂಗ್ಲಿಮಾರ್ ಮತ್ತು ಬಡಾಜೆಗುತ್ತು ಧರ್ಮದೈವಗಳಿಗೆ ಧರ್ಮನೇಮೋತ್ಸವವು ಫೆ. ೭ ರಿಂದ ೧೦ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಎಂದು ಆಡಳಿತ ಮೊಕ್ತೇಸರ ರವಿಶಂಕರ ಶೆಟ್ಟಿ ಬಡಾಜೆ ತಿಳಿಸಿದರು.
ಅವರು ರವಿವಾರ ಅಮ್ಟಾಡಿ ಬಡಾಜೆಗುತ್ತಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಮಂಗ್ಲಿಮಾರ್ ಶ್ರೀ ಅಣ್ಣಪ್ಪ ಪಂಜುರ್ಲಿ, ಧೂಮಾವತಿ ಬಂಟ ಮತ್ತು ಪರಿವಾರ ದೈವಗಳ ಸಾನಿಧ್ಯವನ್ನು ಅಭಿವೃದ್ಧಿ ಪಡಿಸಲಾಗಿದ್ದು, ಊರವರ ಸಹಕಾರದಿಂದ ಅದು ಯಶಸ್ವಿಯಾಗಿ ನಡೆದಿದೆ.
ಪ್ರಸ್ತುತ ಬಡಾಜೆಗುತ್ತಿನಲ್ಲಿ ಫೆ. ೭ರಂದು ನಾಗದರ್ಶನ ನಡೆಯಲಿದ್ದು, ಅದರ ಜತೆಗೆ ಆಶ್ಲೇಷಾ ಬಲಿ, ಇನ್ನಿತರ ಪೂಜಾ ಕೈಕಂರ್ಯ ನಡೆಯುತ್ತದೆ. ಫೆ. ೮ ರಿಂದ ಧರ್ಮನೇಮೋತ್ಸವ ಪ್ರಾರಂಭಗೊಂಡು ಫೆ. ೧೦ರ ವರೆಗೆ ನಡೆಯುತ್ತದೆ. ಫೆ. ೮ ರಂದು ಬೆಳಗ್ಗೆ ಭಂಡಾರ ಬರಲಿದ್ದು, ಮಧ್ಯಾಹ್ನ ೧೨.೩೦ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ, ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು, ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ದೈವಗಳ ಪರಿಚಾರಕರಿಗೆ ಸನ್ಮಾನ ನಡೆಸಲಿದ್ದಾರೆ. ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ಶಾಸಕರಾದ ಯು.ಟಿ.ಖಾದರ್, ಡಿ.ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಕೆ.ಅಭಯಚಂದ್ರ, ಕೃಷ್ಣ ಜೆ.ಪಾಲೇಮಾರ್, ಮಾಜಿ ಶಾಸಕರಾದ ವಸಂತ ಬಂಗೇರ, ಶಕುಂತಳಾ ಟಿ.ಶೆಟ್ಟಿ, ಡಾ| ಮೋಹನ್ ಆಳ್ವ, ಎ.ಜೆ.ಶೆಟ್ಟಿ, ಕೆ.ಸೇಸಪ್ಪ ಕೋಟ್ಯಾನ್ ಭಾಗವಹಿಸಲಿದ್ದಾರೆ.
ಸಂಜೆ ೬.೩೦ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಧರ್ಮಸ್ಥಳದ ಧರ್ಮಾದಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅಧ್ಯಕ್ಷತೆ ವಹಿಸಲಿದ್ದು, ಉಪಮುಖ್ಯಮಂತ್ರಿ ಡಾ| ಸಿ.ಎನ್.ಅಶ್ವತ್ಥನಾರಾಯಣ ಕೃತಿ ಬಿಡುಗಡೆ ಮಾಡಲಿದ್ದಾರೆ.
ಸಂಸದ ನಳಿನ್‌ಕುಮಾರ್ ಕಟೀಲು ತಂತ್ರಿಗಳನ್ನು ಹಾಗೂ ವಸತಿ ಸಚಿವ ವಿ.ಸೋಮಣ್ಣ ಅವರು ಅರ್ಚಕರನ್ನು ಸನ್ಮಾನಿಸುವರು. ಕೃತಿ ಸಂಪಾದಕ ಪ್ರೊ| ರಾಜಮಣಿ ರಾಮಕುಂಜ ಅವರನ್ನು ವಿಧಾನ ಪರಿಷತ್ ಮಾಜಿ ಸಭಾಪತಿ ಡಾ| ಬಿ.ಎಲ್.ಶಂಕರ್ ಅವರು ಸನ್ಮಾನಿಸಲಿದ್ದಾರೆ.
ಅತಿಥಿಗಳಾಗಿ ಶಾಸಕರಾದ ಬಿ.ಎಂ.ಸುಕುಮಾರ್ ಶೆಟ್ಟಿ, ಡಾ| ಭರತ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಬಿ.ಎಂ.ಫಾರೂಕ್, ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ, ಶಶಿಕಿರಣ್ ಶೆಟ್ಟಿ, ಗುರುಕಿರಣ್ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ರಾಧಾಕೃಷ್ಣ ರೈ ಬೂಡಿಯಾರು, ಉಮೇಶ್ ಶೆಟ್ಟಿ ಬಟ್ಟತ್ತೋಡಿ, ರವಿರಾಜ ಶೆಟ್ಟಿ ನಿಟ್ಟೆಗುತ್ತು, ರಾಮಣ್ಣ ರೈ ಮವಂತೂರು, ಚಂದ್ರಹಾಸ ಡಿ.ಶೆಟ್ಟಿ ರಂಗೋಲಿ, ಅಶ್ವಿನಿಕುಮಾರ್ ರೈ, ಪ್ರಕಾಶ್ ಶೆಟ್ಟಿ ಶ್ರೀಶೈಲ ತುಂಬೆ, ಟಿ.ತಾರಾನಾಥ ಕೊಟ್ಟಾರಿ, ನರಸಿಂಹ ಹೊಳ್ಳ ಅಮ್ಟಾಡಿ, ಭುವನೇಶ್ ಪಚ್ಚಿನಡ್ಕ, ಹರೀಶ್ ಶೆಟ್ಟಿ ಪಡು, ಪ್ರೇಮನಾಥ ಬಂಟ್ವಾಳ, ಲೋಕೇಶ್ ಸುವರ್ಣ, ಯತೀಶ್ ಕರ್ಕೇರ, ಪ್ರಶಾಂತ್ ಕೆಂಪುಗುಡ್ಡೆ ಉಪಸ್ಥಿತರಿದ್ದರು.
